Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಫಸ್ಟ್‌ ನೈಟ್‌ಗೂ ಮುನ್ನವೇ ಪತಿ ಆತ್ಮಹತ್ಯೆ, ಹಾಲಿನೊಂದಿಗೆ ಬೆಡ್‌ರೂಮ್‌ಗೆ ಹೋದ ಪತ್ನಿಗೆ ಶಾಕ್
ದೇಶ

ಫಸ್ಟ್‌ ನೈಟ್‌ಗೂ ಮುನ್ನವೇ ಪತಿ ಆತ್ಮಹತ್ಯೆ, ಹಾಲಿನೊಂದಿಗೆ ಬೆಡ್‌ರೂಮ್‌ಗೆ ಹೋದ ಪತ್ನಿಗೆ ಶಾಕ್

Share
1 Min Read
SHARE

newsics.com

ಇಟವಾ(ಉತ್ತರ ಪ್ರದೇಶ): ನವವಿವಾಹಿತನೊಬ್ಬ ತನ್ನ ಮೊದಲ ರಾತ್ರಿಯ ದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತ್ನಿ ಗಂಡನ ಮನೆಗೆ ಬಂದ ಕೆಲವೇ ಸಮಯದಲ್ಲಿ ಪತಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊಸ ಬದುಕಿನ ಆಸೆಯಲ್ಲಿ ಗಂಡನ ಮನೆಗೆ ಬಂದಿದ್ದ ಪತ್ನಿ, ಕೋಣೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದಾಳೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇಟವಾ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯ ಉಶ್ರಾಹರ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಸೈನಿಕ ಗ್ಯಾನ್‌ ಸಿಂಗ್‌ ಅವರ ಕಿರಿಯ ಪುತ್ರ ಸತ್ಯೇಂದ್ರ ಅವರ ಮದುವೆಗೆ ಮುನ್ನ ಅಂದರೆ ಜುಲೈ2ರಂದು ಗ್ರಾಮದಲ್ಲಿ ಅದ್ದೂರಿ ಮೆರವಣಿಗೆ ನೆರವೇರಿತ್ತು. ರಾತ್ರಿಯಿಡೀ ಬ್ಯಾಂಡ್‌ ಬಾಜಾ ನಡೆದಿತ್ತು. ಬಳಿಕ ವಿಧಿವಿಧಾನ ಪ್ರಕಾರ ಸತ್ಯೇಂದ್ರ ಅವರ ವಿವಾಹ ನೆರವೇರಿತ್ತು. ಜುಲೈ 3ರಂದು ವಧು ತನ್ನ ತವರು ಮನೆಗೆ ವಿದಾಯ ಹೇಳಿ ಮೆರವಣಿಗೆಯಲ್ಲಿ ಗಂಡನ ಮನೆಗೆ ಬಂದಿದ್ದಳು.

ಬುಧವಾರ ಸಂಜೆ ವರನ ಮನೆಯಲ್ಲಿ ಅದ್ದೂರಿಯಾಗಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರನೊಂದಿಗೆ ವರನ ಸ್ನೇಹಿತರು ಕೂಡ ಮದುವೆಯನ್ನು ಸಂಭ್ರಮಿಸಿದ್ದರು. ಕಾರ್ಯಕ್ರಮದ ಬಳಿಕ ಡಿಜೆಗೆ ಸ್ವತಃ ವರ ಸತ್ಯೇಂದ್ರ ಹಣವನ್ನೂ ನೀಡಿದ್ದಾರೆ. ಆದರೆ, ಈ ಸಂಭ್ರಮ ಹೆಚ್ಚಿನ ಕಾಲ ಇದ್ದಿರಲಿಲ್ಲ. ಇನ್ನೇನು ಮೊದಲ ರಾತ್ರಿಗೆ ಸಜ್ಜಾಗಬೇಕು ಎನ್ನುವ ಸಮಯದಲ್ಲಿ 2ನೇ ಮಹಡಿಯಲ್ಲಿ ತನ್ನ ಕೋಣೆಯಲ್ಲಿ ಸತ್ಯೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಲು ತೆಗೆದುಕೊಂಡು ವಧು ಕೋಣೆಗೆ ಬಂದಾಗ ಎಷ್ಟೇ ಬಡಿದರೂ ಬಾಗಿಲು ತೆಗೆದಿರಲಿಲ್ಲ. ಅನುಮಾನ ಬಂದು ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣವೇ ಬಾಗಿಲನ್ನು ಒಡೆದು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಈವರೆಗೂ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕಾರಣ ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

ನಾಳೆ (ಜು.5) ಧ್ರುವ ಯೋಗ, ಸರ್ವಾರ್ಥ ಸಿದ್ಧಿಯೋಗ; ಈ ಐದು ರಾಶಿಯವರಿಗೆ ಅದೃಷ್ಟದ ದಿನ

ನನಗೂ ವಿನಯ್ ರಾಜ್‌ಕುಮಾರ್‌ಗೂ‌ ಮದುವೆಯಾಗಿಲ್ಲವೆಂದ ನಟಿ!

ದರ್ಶನ್, ಪವಿತ್ರಾ ಗೌಡ ಟೀಮ್‌ ನ್ಯಾಯಾಂಗ ಬಂಧನ ಜುಲೈ 18ರವರೆಗೆ ವಿಸ್ತರಣೆ

TAGGED:Her husband died before the first night
Share This Article
Facebook Twitter Copy Link Print
Previous Article ನಾಳೆ (ಜು.5) ಧ್ರುವ ಯೋಗ, ಸರ್ವಾರ್ಥ ಸಿದ್ಧಿಯೋಗ; ಈ ಐದು ರಾಶಿಯವರಿಗೆ ಅದೃಷ್ಟದ ದಿನ
Next Article ನಿರಂತರ ಮಳೆ: ಉಡುಪಿಯಲ್ಲಿ ಗುಡ್ಡ ಕುಸಿದು ಮಹಿಳೆ ಸಾವು, ಉತ್ತರ ಕನ್ನಡಕ್ಕೆ NDRF ತಂಡ

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read
ದೇಶಪ್ರಮುಖ

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?