newsics.com
ಅದೃಷ್ಟ ಹೇಗೆ ಯಾವಾಗ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಕೆಲವೊಮ್ಮೆ ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾಗಿರುವ ವ್ಯಕ್ತಿಗಳ ಬಗೆಗಿನ ಸ್ಟೋರಿಗಳನ್ನು ನೀವು ಕೇಳಿರಬಹುದು.ಕೈ ಹಿಡಿದರೆ ರಾತ್ರಿ ಬೆಳೆಗಾಗುವುದರೊಳಗೆ ಎಲ್ಲವೂ ಬದಲಾಗಿಬಿಡಬಹುದು. ಆಟೋ ಚಾಲಕನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಪಶ್ಚಿಮ ಬಂಗಾಳ ನಾಡಿಯಾದ ಕೃಷ್ಣಗಂಜ್ ಪ್ರದೇಶದ ಬಡ . ಅವನು ಖರೀದಿಸಿದ ಲಾಟರಿ ಟಿಕೆಟ್‌ನಿಂದಾಗಿ ಬಹುದೊಡ್ಡ ಮಟ್ಟದಲ್ಲಿ ಹಣ ಗೆದ್ದಿದ್ದಾನೆ.
ಸಾಮಾನ್ಯವಾಗಿ ಲಾಟರಿ ಟಿಕೆಟ್ ಖರೀದಿಸುವ ಚಾಲಕ ಲಕ್ಷ್ಮಣ್ ಪಾಲ್, ಆ ಒಂದು ದಿನ 100 ರೂಪಾಯಿ ಟಿಕೆಟ್ ಅನ್ನು 120 ಕ್ಕೆ ಖರೀದಿಸಿದರು. ಅದರೆ ಅದೃಷ್ಟವೆಂಬಂತೆ ಶನಿವಾರ ನಡೆದ ಡ್ರಾದಲ್ಲಿ ಅವರು ಬರೋಬ್ಬರಿ 1 ಕೋಟಿ ಗೆದ್ದಿದ್ದಾರೆ. ಇದನ್ನು ಕೇಳಿ ಸ್ವತಃ ಆತನೇ ಶಾಕ್ ಆಗಿದ್ದಾನೆ. ತನ್ನ ಸುರಕ್ಷತೆಯ ಬಗ್ಗೆ ಭಯಪಟ್ಟು, ಪಾಲ್ ತಕ್ಷಣವೇ ಗೆದ್ದ ಟಿಕೆಟ್‌ನೊಂದಿಗೆ ತನ್ನ ಸ್ನೇಹಿತನೊಂದಿಗೆ ಕೃಷ್ಣಗಂಜ್ ಪೊಲೀಸ್ ಠಾಣೆಗೆ ಹೋಗಿದ್ದಾನೆ.
ಯಾರಾದರೂ ತನಗೆ ಬೆದರಿಕೆ ಹಾಕಿ ಟಿಕೆಟ್ ಕದಿಯದಂತೆ ತಡೆಯಲು ಅವನು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿಯೇ ಇದ್ದನಂತೆ. ಭಾನುವಾರ ಬೆಳಿಗ್ಗೆ, ಪೊಲೀಸ್ ಭದ್ರತೆಯಲ್ಲಿ, ಪಾಲ್ ಗೆದ್ದ ಟಿಕೆಟ್ ಅನ್ನು ಬ್ಯಾಂಕಿನಲ್ಲಿ ಹೋಗಿ ಠೇವಣಿ ಇಟ್ಟಿದ್ದಾರೆ. ಈ ಹಣವನ್ನು ತನ್ನ ಎಲ್ಲಾ ಸಾಲಗಳನ್ನು ತೀರಿಸಲು, ಮನೆ ಕಟ್ಟಲು ಮತ್ತು ತನ್ನ ಮಗಳ ಭವಿಷ್ಯಕ್ಕಾಗಿ ಸ್ವಲ್ಪ ಹಣವನ್ನು ಉಳಿಸಲು ಬಳಸುವುದಾಗಿ ಪಾಲ್ ಹೇಳಿದ್ದಾರೆ.