newsics.com
ಅನೇಕ ಗಂಡಂದಿರು ತಮ್ಮ ಹೆಂಡತಿಯ ಮಾತನ್ನು ಕೇಳುವುದಿಲ್ಲ. ಹೀಗಾಗಿ ಪತಿ-ಪತ್ನಿಯ ನಡುವೆ ಒಂದಲ್ಲ ಒಂದು ರೀತಿ ಭಿನ್ನಾಭಿಪ್ರಾಯಗಳು ಬರುತ್ತಲೇ ಇರುತ್ತದೆ. ಇದರಿಂದ ಸಂಸಾರದಲ್ಲಿ ಸಮಸ್ಯೆ ಮತ್ತು ಕಲಹ ಹೆಚ್ಚಾಗುತ್ತದೆ. ಆದರೆ ಇನ್ಮುಂದೆ ನಿಮ್ಮ ಪತಿ ನಿಮ್ಮ ಮಾತನ್ನು ಕೇಳ ಬೇಕೆಂದು ನೀವು ಅಂದುಕೊಳ್ಳುತ್ತಾರೆ. ಪತ್ನಿ ಕಂಟ್ರೋಲ್ ಗೆ ತೆಗೆದುಕೊಳ್ಬೇಕು ಎಂದು ಪುರುಷರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಆದರೆ ಈ ಇಬ್ಬರು ಪುರುಷರು ಪತ್ನಿಯರನ್ನು ಕಂಟ್ರೋಲ್ ಮಾಡಲು ಮಾಡಿರುವ ಕೆಲಸಕ್ಕೆ ಬೆಚ್ಚಿ ಬೀಳುತ್ತಿರಾ. ಪತ್ನಿಯರ ಸೊಕ್ಕು ಮುರಿಯೋಕೆ ಹುಲಿಗೆ ಸ್ಕೆಚ್ ಹಾಕಿದ್ದಾರೆ. ಹುಲಿ ಉಗುರು, ಹಲ್ಲನ್ನು ತೆಗೆದುಕೊಂಡು ಬಂದಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಕುಮಾರ್ ಮತ್ತು ಝಾಮ್ ಸಿಂಗ್ ಎಂಬುವರ ಪತ್ನಿಯಂದಿರು ಬಹಳ ಸುಂದರವಾಗಿದ್ದಾರಂತೆ. ಇದೇ ಕಾರಣಕ್ಕೆ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ ಆಗ್ತಿದೆ. ರಾಜ್ಕುಮಾರ್ ಮತ್ತು ಝಾಮ್ ಸಿಂಗ್ ಮಾತನ್ನು ಪತ್ನಿಯರು ಕೇಳ್ತಿಲ್ಲ. ಪತ್ನಿಯನ್ನು ಹೇಗಾದ್ರೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಬೇಕು ಎಂದು ಪ್ಲಾನ್ ಮಾಡಿದ ಇಬ್ಬರು ಮಾಂತ್ರಿಕನ ಮೊರೆ ಹೋದ್ರು. ಮಾಂತ್ರಿಕ, ಸಣ್ಣಪುಟ್ಟ ಮಂತ್ರಾನೋ, ಪೂಜೆನೋ ಹೇಳೋ ಬದಲು, ಹುಲಿಯ ಹಲ್ಲು ಮತ್ತು ಉಗುರುಗಳು ದಾಂಪತ್ಯ ಜೀವನದಲ್ಲಿ ಪ್ರಾಬಲ್ಯ ತರುತ್ತವೆ. ಹೆಂಡತಿ ನಿಯಂತ್ರಣದಲ್ಲಿ ಇರ್ತಾಳೆ ಅಂದಿದ್ದಾನೆ.
ತಮ್ಮ ಜತೆ ಇನ್ನೂ ಮೂವರ ಸಹಾಯ ಪಡೆದು ಕಾಡಿನಲ್ಲಿ ಸತ್ತ ಹುಲಿಯ ಕಳೇಬರ ಸಿಕ್ಕಿದೆ. ಆದ್ರೆ ಅದ್ರ ಬಳಿ ಇನ್ನೊಂದು ಹುಲಿ ಕುಳಿತಿದ್ದ ಕಾರಣ ಹಲ್ಲು ಕೀಳೋಕೆ ಆಗಿರಲಿಲ್ಲ. ಮರುದಿನ ಮತ್ತೆ ಬಂದು ಹುಲಿ ಹಲ್ಲು ಮತ್ತು ಉಗುರನ್ನು ಯಶಸ್ವಿಯಾಗಿ ತಂದು ಮಾಂತ್ರಿಕನ ಕೈಗೆ ಕೊಟ್ಟಿದ್ದಾರೆ. ಹುಲಿ ಹಲ್ಲಿಗೆ ಮಾಂತ್ರಿಕ ತೃಪ್ತನಾಗ್ಲಿಲ್ಲ. ಹುಲಿ ಚರ್ಮ ತೆಗೆದುಕೊಂಡು ಬನ್ನಿ ಎಂದಿದ್ದಾನೆ. ಮಾಂತ್ರಿಕನ ಮಾತನ್ನು ಶಿರಸಾ ಪಾಲಿಸಿದ ಐವರು ಮತ್ತೆ ಕಾಡಿಗೆ ಹೋಗಿದ್ದಾರೆ. ಅವರು ಕಾಡಿಗೆ ಹೋಗುವುದನ್ನು ಯಾರೋ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಾಂತ್ರಿಕ ನಾಪತ್ತೆಯಾಗಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ.
Genetic Blood Disorder ಮದುವೆ ಮುಂಚೆ ಹುಡುಗ-ಹುಡುಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕಂತೆ