newsics.com
ಇಲ್ಲೊಂದು ಪುಟ್ಟ ಮಗುವೊಂದು ಉತ್ತರ ಪತ್ರಿಕೆಯಲ್ಲಿ ಬರೆದಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೋಡುಗರನ್ನು ನಗಿಸುವಂತೆ ಆಗಿದೆ.
ಮಗು ಬರೆದ ಉತ್ತರ ಪತ್ರಿಕೆಯಲ್ಲಿ ಕೆಲವು ಪದಗಳನ್ನು ನೀಡಿ ಅವುಗಳಿಗೆ ವಿರುದ್ದಾರ್ಥಕ ಪದಗಳನ್ನು ಬರೆಯುವಂತೆ ಹೇಳಿದ್ದಾರೆ. ಮಗುವಿಗೆ ಇಂಗ್ಲೀಷ್ ಪದಗಳಾದ good(ಒಳ್ಳೆಯದು), Black(ಕಪ್ಪು) ಹಾಗೂ Original(ಮೂಲ) ಈ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯುವಂತೆ ಕೇಳಲಾಗಿದೆ. ಮಗು ಈ ಪದಗಳಲ್ಲಿ ಮೊದಲೆರಡು ಪದಗಳಾದ ಗುಡ್ ಹಾಗೂ ಬ್ಲ್ಯಾಕ್‌ಗೆ ಬ್ಯಾಡ್ (Bad) ಹಾಗೂ ವೈಟ್(white)ಎಂದು ಉತ್ತರ ಬರೆದಿದೆ. ಆದರೆ ಒರಿಜಿನಲ್ ಪದಕ್ಕೆ ಮಾತ್ರ ಅದು ಆರ್ಟಿಫೀಷಿಯಲ್ ಎಂದು ಬರೆಯುವ ಬದಲು ಚೀನಾ ಎಂದು ಬರೆದು ಬಿಟ್ಟಿದೆ. ಈ ಉತ್ತರ ನೋಡಿ ಶಿಕ್ಷಕರು ಕೂಡ ಶಾಕ್ ಆಗಿದ್ದು, ಚೀನಾ ಪದವನ್ನು ಹೊಡೆದು ಹಾಕಿ ಆರ್ಟಿಫಿಶೀಯಲ್ ಎಂದು ಬರೆದಿದ್ದಾರೆ.
ವಿದ್ಯಾರ್ಥಿಯ ಈ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಈ ಹುಡುಗ ಒಮ್ಮೆಗೆ ಸತ್ಯ ಹೇಳಿ ಬಿಟ್ಟ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
https://www.instagram.com/reel/DE-zcgqTA-B/?igsh=d2c0OHp3bjZ1N3Vy