newsics.com
ಇತ್ತೀಚೆಗಿನ ದಿನಗಳಲ್ಲಿ ವಿಡಿಯೋ ಮತ್ತು ರೀಲ್ಸ್ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಅದರಲ್ಲಿಯೂ ಚಿತ್ರ ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಳ್ಳುವವರೇ ಹೆಚ್ಚು. ಹೌದು ಈ ಬೈಕ್ ಅಥವಾ ಕಾರುಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಅಪಾಯಗಳನ್ನು ಮೈ ಮೇಲೆ ಎಳೆದುಕೊಂಡ ಸುದ್ದಿಗಳನ್ನು ಆಗಾಗ ಕೇಳುತ್ತಿರುತ್ತೇವೆ. ಇದೀಗ ಇಂತಹದ್ದೆ ಘಟನೆಯೂ ಗಾಯಕನೊಬ್ಬ ಪ್ಯಾಂಟ್ಗೆ ಬೆಂಕಿ ಹಚ್ಚಿಕೊಳ್ಳುವುದು ಸೆರೆಯಾಗಿದೆ. ಬೆಂಕಿ ಅವನ ಕಾಲುಗಳ ಕೆಳಗೆ ಉರಿಯುತ್ತಿರುವಾಗ ಅವನು ಡ್ಯಾನ್ಸ್ ಮಾಡಿದ್ದಾನೆ.
ಎಫೆಕ್ಟ್ಗಾಗಿ ಸ್ಟಂಟ್ ಮಾಡಲು ಹೋಗಿ ತನ್ನ ಪ್ಯಾಂಟ್ಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಇದು ಅನಾಹುತಕ್ಕೆ ಕಾರಣವಾಗಿದೆ. ಈ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಗಾಯಕನಿಗೆ ಉರಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಜ್ವಾಲೆಗಳು ಅವನ ಪ್ಯಾಂಟ್ನ ಎಲ್ಲಾ ಭಾಗಕ್ಕೂ ಆವರಿಸಿವೆ. ಆಗ ಪರಿಸ್ಥಿತಿ ಕೈಮೀರುತ್ತಿದೆ ಎಂಬುದು ಸ್ಪಷ್ಟವಾಯಿತು. ಕೊನೆಗೆ ಗಾಯಕ ಬೆಂಕಿಯನ್ನು ನಂದಿಸಲು ತನ್ನ ಪ್ಯಾಂಟ್ ತೆಗೆದು ಬಿಸಾಕಿದ್ದಾನೆ.ಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.