newsics.com
ಕಡಿಮೆ ಆದಾಯದ ದೇಶಗಳಲ್ಲಿ ಅಂಟಿಬಿಯೋಟಿಕ್ಸ್ ಪ್ರಿಸ್ಕ್ರಿಪ್ಷನ್ ರೇಟ್ ಅಪಾಯಕಾರಿಯಾಗಿದೆ. ಅಂಟಿಬಿಯೋಟಿಕ್ಸ್ ಕೆಲವೊಮ್ಮೆ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳಾಗಿವೆ. ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ಅಥವಾ ಸಂತಾನೋತ್ಪತ್ತಿ ಮಾಡುವುದನ್ನು ತಡೆಯುವ ಮೂಲಕ ಅವು ಕಾರ್ಯನಿರ್ವಹಿಸುತ್ತವೆ.
ಇತ್ತೀಚಿನ ಸಂಶೋಧನೆಯ ಪ್ರಕಾರ ಪ್ರತಿಜೀವಕಗಳು ಅಥವಾ ಆಂಟಿಬಯೋಟಿಕ್ಸ್ ಮತ್ತು ಗ್ಯಾಸ್ಟ್ರಿಕ್ ನಿಗ್ರಹಿಸುವ ಔಷಧಿಗಳು, ವಿಶೇಷವಾಗಿ ಪ್ರೋಟಾನ್ ಪಂಪ್ ಇನ್ಹಿಬಿಟರ್‌ಗಳು (ಪಿಪಿಐಎಸ್) ,ಅತಿಯಾಗಿ ಮತ್ತು ಅನಗತ್ಯವಾಗಿ ಬಳಸುವುದು ಅಪಾಯ ಎಂದು ತಿಳಿದು ಬಂದಿದೆ.
ಪ್ರತಿಜೀವಕಗಳನ್ನು ನಿಯಮಿತವಾಗಿ ಅಥವಾ ದೀರ್ಘಕಾಲವಾಗಿ ಬಳಸುವುದು “ಮೆಡಿಕಲೀ ಇನ್‌ಡಿಸ್ಯೂಡ್ ಡಿಸ್ಬಯೋಸಿಸ್” ಎಂದು ಕರೆಯಲಾಗುವ ಸ್ಥಿತಿಗೆ ಕಾರಣವಾಗಬಹುದು. ಈ ಸ್ಥಿತಿಯಲ್ಲಿ ಕರುಳಿನ ಸ್ನೇಹಿ ಬ್ಯಾಕ್ಟೀರಿಯಾ ನಾಶವಾಗುತ್ತವೆ ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾ ಹೆಚ್ಚು ಬೆಳೆದು ಬರುವುದು
ಕರುಳಿನ ಆರೋಗ್ಯವನ್ನು ಕೇವಲ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ನೋಡಬಾರದು. ಇದು ದೇಹದ ಇತರ ಅನೇಕ ವ್ಯವಸ್ಥೆಗಳಿಗೂ ಪ್ರಭಾವ ಬೀರುತ್ತದೆ.
ರೋಗ ನಿರೋಧಕ ಶಕ್ತಿ, ಮಾನಸಿಕ ಆರೋಗ್ಯ, ಹಾರ್ಮೋನ್ ಸಮತೋಲನ ಮತ್ತು ಚಯಾಪಚಯ ಕ್ರಿಯೆಗಳು ಇದರಲ್ಲಿ ಬರುತ್ತವೆ. ಆದ್ದರಿಂದ, ನಾವು ಬಳಸುವ ಔಷಧಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು