newsics.com
ಚೆನ್ನೈ: ಮದುವೆ ಎಂದರೆ ಪವಿತ್ರ ಬಂಧ. ಮದುವೆ ಎರಡು ಮನಸ್ಸುಗಳ ಬೆಸುಗೆ, ಎರಡು ಕುಟುಂಬಗಳ ಕೂಡುವಿಕೆಯಾಗಿದೆ. ಹೌದು ಇಬ್ಬರೂ ವಿಭಿನ್ನ ಗುಣ ಸ್ವಭಾವ ಹೊಂದಿರುವ ವ್ಯಕ್ತಿಗಳು ಮದುವೆ ಎನ್ನುವ ಬಂಧಕ್ಕೆ ಒಳಪಟ್ಟು ಕಷ್ಟ ಸುಖ ಏನೇ ಇರಲಿ, ಜೀವನ ಪರ್ಯಂತ ಜೊತೆಯಾಗಿ ಬದುಕುವುದು. ಮದುವೆ ಆಚರಣೆ ಮತ್ತು ಶಾಸ್ತ್ರಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೇರೆಯಾಗಿರುತ್ತವೆ. ಆದರೆ ಇಲ್ಲಿ ನಡೆಯುವ ಮದುವೆ ಶಾಸ್ತ್ರದ ವೀಡಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಜೋಡಿಯ ಮುಂದೆ ಮಕ್ಕಳು ಸೇರಿದಂತೆ ಹಲವು ಮಹಿಳೆಯರು ಕುಳಿತಿದ್ದರು.ವಧು ಕೊಂಚವೂ ನಾಚಿಕೊಳ್ಳದೇ ಎಲ್ಲರೆದರು ವಧು ನೀಡಿದ ಕಿಸ್‌ಗೆ ವರ ಫುಲ್ ಶಾಕ್ ಆಗಿದ್ದಾನೆ.
ಮದುವೆಯಲ್ಲಿ ಕೆಲವು ಶಾಸ್ತ್ರಗಳನ್ನು ಮಾಡಲಾಗುತ್ತದೆ. ವರ ಬಾಯಿಯಲ್ಲಿ ಹಿಡಿದಿರುವ ತಿಂಡಿವನ್ನು ವಧು ಕಚ್ಚಿ ತೆಗೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ವರ ಸಹ ಮಾಡಬೇಕಾಗುತ್ತದೆ.
ಅದೇ ರೀತಿ ಕುರ್ಚಿ ಮೇಲೆ ನವಜೋಡಿ ಕುಳಿತಿರುತ್ತಾಳೆ. ವರನ ಬಾಯಲ್ಲಿರುವ ಲಡ್ಡು ಕಚ್ಚಿಕೊಂಡು ತೆಗೆದುಕೊಳ್ಳುವಂತೆ ವಧುವಿಗೆ ಹೇಳಲಾಗಿರುತ್ತದೆ. ವಧು ಲಡ್ಡು ಮಾತ್ರ ತೆಗೆದುಕೊಳ್ಳದೇ ಕಿಸ್ ಮಾಡಿದ್ದಾಳೆ. ವರನ ಮುಖವನ್ನು ತನ್ನೆರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡು ಚುಂಬಿಸಿದ್ದಾಳೆ. ಇದನ್ನು ನೋಡಿದ ಸುತ್ತಲಿದ್ದ ಜನರು ಜೋರಾಗಿ ಕೂಗುವ ಮೂಲಕ ವಧುವನ್ನು ಹುರಿದುಂಬಿಸಿದ್ದಾರೆ. ಇದರಿಂದ ವರು ಒಂದು ಕ್ಷಣ ಶಾಕ್ ನಾಚಿಕೊಂಡು ತಲೆ ತಗ್ಗಿಸಿದ್ದಾನೆ. ವರ ನಾಚಿಕೊಳ್ಳುತ್ತಿದ್ದಂತೆ ವಧು ಮತ್ತೆ ಆತನ ಮುಖ ನೋಡುತ್ತಾನೆ. ಆಗ ವರ ತನ್ನ ತುಟಿಗಳನ್ನು ಒರಿಸಿಕೊಳ್ಳುತ್ತಾನೆ. ನಂತರ ವರನ ಸರದಿ ಬರುತ್ತದೆ. ಆದ್ರೆ ವರ ಸರಳವಾಗಿ ವಧುವಿನ ಬಾಯಲ್ಲಿರುವ ಲಡ್ಡು ಕಚ್ಚಿಕೊಂಡು ತಿನ್ನುತ್ತಾನೆ.
ಈ ವೈರಲ್ ವಿಡಿಯೋವನ್ನು Sketchkarthik ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. .
ಬಹುತೇಕ ಕಮೆಂಟ್‌ಗಳು ತಮಿಳು ಭಾಷೆಯಲ್ಲಿರೋದರಿಂದ ಇದು ತಮಿಳುನಾಡು ಭಾಗದ ವಿಡಿಯೋ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಆದ್ರೆ ನಿಖರ ಸ್ಥಳ ಗೊತ್ತಾಗಿಲ್ಲ. ಇನ್ನು ಕೆಲ ಪಡ್ಡೆ ಹುಡುಗರು ಪೋಲಿಯಾಗಿ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋಗೆ ಜನರು ಮೆಚ್ಚುಗೆ ಸೂಚಿಸಿದ್ದಕ್ಕಿಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಮದುವೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬುದನ್ನು ನಂಬಲು ಆಗುತ್ತಿಲ್ಲ. ಅದು ಇಷ್ಟೊಂದು ಮಕ್ಕಳು ಮಹಿಳೆಯರಿರುವಾಗ ಏನಿದು ಅಸಭ್ಯ ವರ್ತನೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.