newsics.com
ನವದೆಹಲಿ: ಪಹಲ್ಗಾಂ ನರಮೇಧ ಪ್ರತೀಕಾರವಾಗಿ ಭಾರತದ ತಿರುಗೇಟಿಗೆ ಬೆದರಿರುವ ಪಾಕಿಸ್ತಾನಕ್ಕೆ ಮತ್ತೊಂದು ಕಂಟಕ ಎದುರಾಗಿದೆ.
ಪಾಕಿಸ್ತಾನದ ಎಲ್ಲಾ ನೋಂದಾಯಿತ ಮತ್ತು ಮಿಲಿಟರಿ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವುದಾಗಿ ಭಾರತವು ವಾಯುಪಡೆಗ ಸೂಚನೆ ನೀಡಿದೆ.ಇದಕ್ಕೂ ಮೊದಲು, ಪಾಕಿಸ್ತಾನವು ಮೇ 2 ರವರೆಗೆ ಇಸ್ಲಾಮಾಬಾದ್ ಮತ್ತು ಲಾಹೋರ್ ಮೇಲೆ ತಾತ್ಕಾಲಿಕ ಹಾರಾಟ ನಿಷೇಧ ವಲಯವನ್ನು(NOTAM) ಘೋಷಿಸಿತ್ತು.
NOTAM ಪ್ರಕಾರ, ಈ ನಿರ್ಬಂಧವು ಏಪ್ರಿಲ್ 30 ರಿಂದ ಮೇ 23, 2025 ರವರೆಗೆ ಜಾರಿಯಲ್ಲಿರುತ್ತದೆ, ಈ ಸಮಯದಲ್ಲಿ ಯಾವುದೇ ಪಾಕಿಸ್ತಾನಿ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.