newsics.com
ನವದೆಹಲಿ: ಭಾರತೀಯ ಸೇನೆಗೆ ನೀವು ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ನೀವೇ ತಕ್ಷಣಕ್ಕೆ ನಿರ್ಧರಿಸಿ ಕಾರ್ಯರೂಪಕ್ಕೆ ತನ್ನಿ ಎಂದು ಸೇನಾಧಿಕಾರಿಗಳಿಗೆ ಪ್ರಧಾನಿಮೋದಿ ಸೂಚನೆ ನೀಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
ಸಭೆಯಲ್ಲಿ, ಭಯೋತ್ಪಾದನೆಗೆ ಬಲವಾದ ಪ್ರತಿಕ್ರಿಯೆ ನೀಡುವುದು ತಮ್ಮ ದೃಢ ರಾಷ್ಟ್ರೀಯ ಸಂಕಲ್ಪ ಎಂದು ಪ್ರಧಾನಿ ಮೋದಿ ರಕ್ಷಣಾ ಅಧಿಕಾರಿಗಳಿಗೆ ತಿಳಿಸಿದರು ಮತ್ತು ಭಾರತೀಯ ಸಶಸ್ತ್ರ ಪಡೆಗಳ ವೃತ್ತಿಪರ ಸಾಮರ್ಥ್ಯಗಳಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು.
ಉಗ್ರರ ವಿರುದ್ಧ ಯಾವ ರೀತಿ ಉತ್ತರ ಕೊಡಬೇಕು ಎಂಬುದನ್ನು ಸೇನೆಗೆ ನಿರ್ಧರಿಸಲಿ. ಟಾರ್ಗೆಟ್, ಸಮಯವನ್ನು ನಿರ್ಧರಿಸಿ ಪಾಕಿಸ್ತಾನಕ್ಕೆ ಹೇಗೆ ಉತ್ತರ ಕೊಡಬೇಕು ಎಂಬುದನ್ನು ಸೇನೆ ತೀರ್ಮಾನಿಸಲಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.