newsics.com
ಅಮೆರಿಕ: ಇಲ್ಲೊಬ್ಬ ಶಿಕ್ಷಕಿ ವೃತ್ತಿ ಮೌಲ್ಯ, ತನ್ನ ಕರ್ತವ್ಯವನ್ನೇ ಮರೆತು ಶಾಲೆಯ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇದೀಗ ಲೈಂಗಿಕ ಕಿರುಕುಳದ ಆರೋಪದಡಿ ಶಿಕ್ಷಕಿಯನ್ನು ಬಂಧಿಸಲಾಗಿದೆ. ಈ ಘಟನೆ ಅಮೆರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ.
ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಇಲ್ಲಿನ ಫ್ರೀಹೋಲ್ಡ್ ಇಂಟರ್ ಮೀಡಿಯೇಟ್ ಶಾಲೆಯ ಶಿಕ್ಷಕಿ ಅಲಿಸನ್ ಹ್ಯಾವ್‌ಮೆನ್ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವರ್ಷದ ಆರಂಭದಲ್ಲಿಯೇ ಅಲಿಸನ್ ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಕಿರುಕುಳವನ್ನು ನೀಡಲು ಪ್ರಾರಂಭಿಸಿದ್ದು, ಈ ವಿಷಯ ಹೊರ ಬೀಳುತ್ತಿದ್ದಂತೆ ಪೊಲೀಸರು ಶಿಕ್ಷಕಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ, ಆಕೆಯನ್ನು ಬಂಧಿಸಿದ್ದಾರೆ. ಪ್ರಸ್ತುತ ಈ ಶಿಕ್ಷಕಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾನ್‌ಮೌತ್ ಕೌಂಟಿಯ ಜೈಲಿನಲ್ಲಿ ಇರಿಸಲಾಗಿದೆ.
ಪತ್ನಿ ಗರ್ಭಿಣಿಯಾಗಿದ್ದಕ್ಕೆ ಗನ್‌ನಿಂದ ಹಣೆಗೆ ಶೂಟ್ ಮಾಡ್ಕೊಂಡ ಗಂಡ, ಆಸ್ಪತ್ರೆಗೆ ದಾಖಲು
ಪ್ರೇಯಸಿ ಕಣ್ಣಲ್ಲಿ ಸಂತೋಷ ಕಾಣುವುದಕ್ಕಾಗಿ ಹೋಮ್ ಗಾರ್ಡ್ ಕೆಲಸ ಬಿಟ್ಟು ಕಳ್ಳತನಕ್ಕಿಳಿದ ಬಾಯ್ ಫ್ರೆಂಡ್!
ಪಂದ್ಯ ವೀಕ್ಷಣೆಗಾಗಿ ಅಂತ್ಯಕ್ರಿಯೆಯನ್ನೇ ಮುಂದೂಡಿದರು, ಶವದ ಪಕ್ಕ ಕುಳಿತು ಟಿವಿಯಲ್ಲಿ ಮ್ಯಾಚ್ ನೋಡಿದರು…!