newsics.com
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಬಲಿ ಪಡೆದುಕೊಂಡಿದೆ.
ಇದರಲ್ಲಿ ಹರಿಯಾಣದ ಕರ್ನಾಲ್‌ನ 26 ವರ್ಷದ ಭಾರತೀಯ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟಿದ್ದಾರೆ.
ಪತ್ನಿ ಹಿಮಾಂಶಿ ಸೋವಾಮಿ ಜೊತೆ ಅವರು ಕಾಶ್ಮೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಆದರೆ ಭಯೋತ್ಪಾದಕ ದಾಳಿಗೆ ಮೊದಲು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೋವಾಮಿ ನೃತ್ಯ ಮಾಡಿದ್ದರು. ಇದು ಅವರ ಕೊನೆಯ ವಿಡಿಯೋ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ಈ ವಿಡಿಯೋದ ಬಗ್ಗೆ ಪ್ರತಿಕ್ರಿಯಿಸಿದ ಹಿಮಾಂಶಿ ಸೋವಾಮಿ , ಇದು ನಮ್ಮ ವಿಡಿಯೋ ಅಲ್ಲ. ದಯವಿಟ್ಟು ಸುಳ್ಳು ಸುದ್ದಿ ಪ್ರಕಟಿಸಬೇಡಿ ಎಂದು ಯೂಟ್ಯೂಬರ್ಸ್ಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಭಯೋತ್ಪಾದಕ ದಾಳಿಯಲ್ಲಿ ದುರಂತವಾಗಿ ಸಾವನ್ನಪ್ಪುವ ಮೊದಲು, ಪಹಲ್ಗಾಮ್ ಪ್ರವಾಸದ ಸಮಯದಲ್ಲಿ ಲೆಫ್ಟಿನೆಂಟ್ ನರ್ವಾಲ್ ಮತ್ತು ಅವರ ಪತ್ನಿಯ ಕೊನೆಯ ವೀಡಿಯೊ ವೈರಲ್ ಆಗಿತ್ತು. ಆದರೆ ಈ ವಿಡಿಯೋ ತಮ್ಮದಲ್ಲ ಎಂದು ಹಿಮಾಂಶಿ ಸೋವಾಮಿ ಸ್ಪಷ್ಟಪಡಿಸಿದ್ದಾರೆ.
ಆದರೆ ಈ ವಿಡಿಯೋ ಆಶಿಶ್ ಸೆಹ್ರಾವತ್ ಮತ್ತು ಯಾಶಿಕಾ ಶರ್ಮಾ ತಮ್ಮದು ಎಂದು ಹೇಳಿದ್ದಾರೆ. ಕ್ಲಿಪ್‌ನಲ್ಲಿರುವ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವ ಸೆಹ್ರಾವತ್ ಅವರು ಇದು ಹಿಮಾಂಶಿ ಸೋವಾಮಿ ದಂಪತಿ ವಿಡಿಯೋ ಅಲ್ಲ. ಬದಲಿಗೆ ನಮ್ಮ ವಿಡಿಯೋ. ಗುಂಡಿನ ದಾಳಿ ನಡೆದ ಸ್ಥಳದಲ್ಲಿಯೇ ಏಪ್ರಿಲ್ 14 ರಂದು ಕಾಶ್ಮೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಈ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಇದನ್ನು ನಾವು ಶೇರ್ ಮಾಡಿದ್ದು, ಆದರೆ ತಪ್ಪಾಗಿ ಅವರ ಹೆಸರಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಎಂದಿದ್ದಾರೆ.