newsics.com
ಮೀರತ್ ನಲ್ಲಿ ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಎರಡು ದಿನಗಳ ಹಿಂದೆ ಅಮಿತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂಬಾತ ಮಲಗಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದ. ಕೈಯಲ್ಲಿ ಹಾವು ಹಚ್ಚಿದ್ದ 10 ಗಾಯಗಳಿತ್ತು. ಹೀಗಾಗಿ ಮೇಲ್ನೋಟಕ್ಕೆ ಅದು ಹಾವು ಕಡಿತದಿಂದಾದ ಸಾವೆಂದು ಹೇಳಿದ್ದರೂ ಕೂಡ ಹಾವು ಕಚ್ಚಿ ಓಡಿ ಹೋಗದೆ ಅಲ್ಲೇ ಇರುವುದು ಅನುಮಾನ ಸೃಷ್ಟಿಸಿತ್ತು. ಅಮಿತ್ ಬೆಡ್ ಮೇಲೆ ಶವವಾಗಿ ಮಲಗಿದ್ದ, ಪಕ್ಕದಲ್ಲಿ ಹಾವಿತ್ತು, ಕೂಡಲೇ ಹಾವಾಡಿಗನನ್ನು ಕರೆಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದಿದ್ದ ಪೊಲೀಸರು, ಅಮಿತ್ನ ಮೃತದೇಹವನ್ನ ಪೋಸ್ಟ್ ಮಾರ್ಟಮ್ಗೆ ಕಳಿಸಿಕೊಟ್ಟಿದ್ದರು. ಆದರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ ನೋಡಿದ ಮೇಲೆ, ಪೊಲೀಸರಿಗೆ ಶಾಕ್ ಕಾದಿತ್ತು. ಆ ರಿಪೋರ್ಟ್ನಿಂದಲೇ ಅಸಲಿ ಕಥೆ ಬಯಲಾಗಿತ್ತು. ಪೋಸ್ಟ್ಮಾರ್ಟಂ ರಿಪೋರ್ಟ್ ಪ್ರಕಾರ ಅಮಿತ್ ಹಾವು ಕಚ್ಚಿ ಸತ್ತಿರಲಿಲ್ಲ. ಬದಲಿಗೆ ಉಸಿರುಗಟ್ಟಿ ಸತ್ತಿದ್ದು ಎಂದು ತಿಳಿದು ಬಂದಿದೆ.
ಅಮಿತ್ ಪತ್ನಿ ರವಿತಾ, ಅಮಿತ್ ಅವರ ಆಪ್ತ ಸ್ನೇಹಿತನೂ ಆಗಿದ್ದ ತನ್ನ ಪ್ರಿಯಕರ ಅಮರದೀಪ್ ಸಹಾಯದಿಂದ ಅವರ ಕೊಲೆಗೆ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.ತನ್ನ ಗಂಡನನ್ನು ಕೊಲ್ಲಲು ಮತ್ತು ಅನುಮಾನ ಬರದಂತೆ ತಡೆಯಲು, ರವಿತಾ ಎಚ್ಚರಿಕೆಯಿಂದ ಕೊಲೆಗೆ ಸಂಚು ರೂಪಿಸಿದ್ದಳು. 1,000 ರೂ.ಗೆ ಹಾವನ್ನು ಖರೀದಿಸಿ, ಅಮಿತ್ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಹಾವನ್ನು ಅವನ ದೇಹದ ಕೆಳಗೆ ಇಟ್ಟಿದ್ದಾಳೆ. ಇದೀಗ ಕೊಲೆಗಾತಿಯಾಗಿ ಜೈಲು ಸೇರಿದ್ದಾಳೆ
https://x.com/lokeshRlive/status/1912709428891050465
https://www.newsics.com/2025/04/17/an-eel-fish-that-came-out-of-the-stomach-of-a-flying-bird/