Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ATM on the train! ರೈಲಲ್ಲೇ ಎಟಿಎಂ! ಪ್ರಯಾಣಿಸುವಾಗಲೇ ನೀವು ಹಣ ಡ್ರಾ ಮಾಡಬಹುದು! ವಿಡಿಯೋ ನೋಡಿ
ದೇಶಪ್ರಮುಖ

ATM on the train! ರೈಲಲ್ಲೇ ಎಟಿಎಂ! ಪ್ರಯಾಣಿಸುವಾಗಲೇ ನೀವು ಹಣ ಡ್ರಾ ಮಾಡಬಹುದು! ವಿಡಿಯೋ ನೋಡಿ

Share
1 Min Read
SHARE

newsics.com

ಮುಂಬೈ: ಇನ್ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗಲೇ ಎಟಿಎಂನಿಂದ ಹಣ ಡ್ರಾ ಮಾಡಬಹುದು.

ಭಾರತೀಯ ರೈಲ್ವೆ ಇಂಥದೊಂದು ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ.

ಮುಂಬೈ – ಮನ್ಮಾಡ್ ಪಂಚವಟಿ ಎಕ್ಸ್ಪ್ರೆಸ್ ರೈಲಿನಲ್ಲಿ ಎಟಿಎಂ ಅಳವಡಿಸಲಾಗಿದ್ದು, ದೇಶದ ಮೊದಲ ಎಟಿಎಂ ಸಹಿತ ರೈಲು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಬೋಗಿಯಲ್ಲೇ ಎಟಿಎಂ:

ರೈಲಿನ ಹವಾನಿಯಂತ್ರಿತ ಬೋಗಿಯಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು, ಇದರ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ರೈಲು ಚಲಿಸುತ್ತಿರುವಾಗಲೂ ಪ್ರಯಾಣಿಕರು ಹಣ ಡ್ರಾ ಮಾಡಬಹುದು.

ಭಾರತೀಯ ರೈಲ್ವೆಯ ನವೀನ ಮತ್ತು ಶುಲ್ಕೇತರ ಆದಾಯ ಕಲ್ಪನೆಗಳ ಯೋಜನೆಯ (ಐಎನ್ಎಫ್ಆರ್ಐಎಸ್) ಭಾಗವಾಗಿ ಬೋಗಿಯಲ್ಲಿ ಎಟಿಎಂ ಪರಿಚಯಿಸಲಾಗಿದೆ.

ಭಾರತೀಯ ರೈಲ್ವೆಯ ಭುಸಾವಲ್ ವಿಭಾಗ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ನಡುವಿನ ಸಹಯೋಗದೊಂದಿಗೆ ಈ ಎಟಿಎಂ ಸ್ಥಾಪಿಸಲಾಗಿದೆ. ಪ್ರಯಾಣದ ಉದ್ದಕ್ಕೂ ಯಂತ್ರವು ಸುಗಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಪ್ರಯೋಗವು ಯಶಸ್ವಿಯಾಗಿ ನಡೆಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಿಗ್ನಲ್ ಸಮಸ್ಯೆ:

ಸುರಂಗಗಳು ಮತ್ತು ಸೀಮಿತ ಮೊಬೈಲ್ ಸಂಪರ್ಕದಿಂದಾಗಿ ಕಳಪೆ ಸಿಗ್ನಲ್ಗೆ ಹೆಸರುವಾಸಿಯಾದ ಇಗತ್ಪುರಿ ಮತ್ತು ಕಸರಾ ನಡುವಿನ ಮಾರ್ಗದಲ್ಲಿ ಅಲ್ಪಕಾಲ ನೆಟ್ ವರ್ಕ್ ಸಮಸ್ಯೆಗಳು ಕಂಡುಬಂದವು.

ಫಲಿತಾಂಶಗಳು ಉತ್ತಮವಾಗಿವೆ. ಜನರು ಈಗ ಪ್ರಯಾಣಿಸುವಾಗಲೇ ತಮ್ಮ ಖಾತೆಯಿಂದ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ. ನಾವು ಎಟಿಎಂ ಯಂತ್ರದ ಕಾರ್ಯಕ್ಷಮತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ ಎಂದು ಭುಸಾವಲ್ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಇತಿ ಪಾಂಡೆ ಹೇಳಿದರು.

ಎಟಿಎಂ ಅನ್ನು ಎಸಿ ಬೋಗಿಯಲ್ಲಿ ಅಳವಡಿಸಲಾಗಿದ್ದರೂ, ಪಂಚವಟಿ ಎಕ್ಸ್ಪ್ರೆಸ್ ನ ಎಲ್ಲಾ 22 ಬೋಗಿಗಳಲ್ಲಿನ ಪ್ರಯಾಣಿಕರು ಇದನ್ನು ಬಳಸಬಹುದು. ನಗದು ಡ್ರಾ ಮಾಡುವುದು ಮಾತ್ರವಲ್ಲದೇ ಪ್ರಯಾಣಿಕರು ಚೆಕ್ ಪುಸ್ತಕಗಳನ್ನು ಆರ್ಡರ್ ಮಾಡಲು ಮತ್ತು ಖಾತೆ ಸ್ಟೇಟ್ ಮೆಂಟ್ಗಳನ್ನು ಪಡೆಯಲು ಸಹ ಈ ಎಟಿಎಂ ಬಳಸಬಹುದು.

ಸಿಸಿಟಿವಿ ಕಣ್ಗಾವಲು:

ಸುರಕ್ಷತೆ ಹಿನ್ನೆಲೆಯಲ್ಲಿ ಎಟಿಎಂಗೆ ಶಟರ್ ಅಳವಡಿಸಲಾಗಿದೆ ಮತ್ತು ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾಗಳಿಂದ ಮೇಲ್ವಿಚಾರಣೆ ಮಾಡಲಾಗುತ್ತದೆ.

ಈ ಸೌಲಭ್ಯ ಜನಪ್ರಿಯವಾದರೆ ಸೇವೆಯನ್ನು ಮತ್ತಷ್ಟು ರೈಲುಗಳಿಗೆ ವಿಸ್ತರಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

https://twitter.com/i/status/1912366591913886196

Viral ಚಲಿಸುವ ರೈಲಿನ ಪಕ್ಕದಲ್ಲಿ ಓಡಿದ ಫಿಟ್ ನೆಸ್ ಇನ್ಫ್ಲುಯೆನ್ಸರ್ : ವೈರಲ್ ವಿಡಿಯೋ ನೋಡಿ

Viral News ದಾಂಪತ್ಯ ಜೀವನಕ್ಕೆ ಕಾಲಿಟ್ಟ 3 ಅಡಿ ವರ, 3 ಅಡಿ ವಧು

TAGGED:#atm #rail #panchavatiexpress #firsttrain #indianrailway #passengers #manmad #mumbai
Share This Article
Facebook Twitter Copy Link Print
Previous Article Viral Video ಕರುಳು ಹಿಂಡುವ ದೃಶ್ಯ : ಮಗುವಿನ ಕಣ್ಣೆದುರೇ ಕೊಚ್ಚಿ ಹೋದ ತಾಯಿ
Next Article PM MODI ವಕ್ಫ್‌ ಕಾಯ್ದೆ ಗದ್ದಲದ ನಡುವೆಯೇ ರಾಷ್ಟ್ರಪತಿ ಭೇಟಿಯಾಗಿದ್ದೇಕೆ ಮೋದಿ?

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?