newsics.com
ಉತ್ತರಾಖಂಡ : ರೀಲ್ಸ್ ಮಾಡೋ ಚಟ ನಮ್ಮ ಜನರಿಗೆ ಎಷ್ಟು ಅಂಟಿದೆ ಅಂದ್ರೆ ಹೋದ ಹೋದಲ್ಲಿ, ಕಂಡ ಕಂಡಲ್ಲಿ ರೀಲ್ಸ್ ಮಾಡ್ತಾರೆ. ದಿಢೀರ್ ಎಂದು ಫೇಮಸ್ ಆಗಲು ಕಾಣುವ ಮಾರ್ಗ ಇದೊಂದೇ. ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ, ಕಾಂಪಿಟೇಷನ್ ಕೂಡ ಜಾಸ್ತಿಯಾಗುತ್ತಿದೆ. ಅದಕ್ಕಾಗಿಯೇ ಕೆಲವರು ವಿಭಿನ್ನ ರೀತಿಯಲ್ಲಿ ರೀಲ್ಸ್ ಮಾಡುವ ತವಕದಲ್ಲಿ ಇರುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಮಂದಿ ಅಪಾಯಕಾರಿ ಎನ್ನುವ ರೀಲ್ಸ್ ಮಾಡಿ ಜೀವ ಕಳೆದುಕೊಂಡವರಿದ್ದಾರೆ. ಇದೀಗ ಅಂತಹಾದುದೇ ಒಂದು ಘಟನೆ ಉತ್ತರಾಖಂಡ ಉತ್ತರಾಕಾಶಿಯ ಮಣಿಕರ್ಣಿಕಾ ಘಾಟ್ನಲ್ಲಿ ನಡೆದಿದೆ..
ರೀಲ್ಸ್ ಮಾಡುವ ಭರದಲ್ಲಿ ಆಯತಪ್ಪಿ ಗಂಗಾ ನದಿಯ ಪ್ರವಾಹಕ್ಕೆ ಮಹಿಳೆಯೊಬ್ಬರು ಕೊಚ್ಚಿ ಹೋಗಿದ್ದಾರೆ. ಈ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಮಹಿಳೆಯು ರೀಲ್ಸ್ ಮಾಡುವುದಕ್ಕಾಗಿ ನೀರಿನ ಆಳಕ್ಕೆ ಇಳಿಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅಷ್ಟರಲ್ಲಿ ಕಾಲು ಜಾರಿ ಪ್ರಬಲ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಆಕೆಯ ಮಗು “ಅಮ್ಮ” ಎಂದು ಜೋರಾಗಿ ಅಳುತ್ತಿರುವ ದೃಶ್ಯವು ಕರುಳು ಹಿಂಡುವಂತಿದೆ. ವರದಿಯ ಪ್ರಕಾರ, ಈವರೆಗೆ ಪೊಲೀಸರು ಮಹಿಳೆಯ ಮೃತದೇಹವನ್ನು ಪತ್ತೆ ಮಾಡಲಾಗಿಲ್ಲ.
https://www.newsics.com/2025/04/16/china-says-we-are-ready-for-talks-if-we-are-respected/