newsics.com
ಸೋಶಿಯಲ್ ಮಿಡಿಯಾದಲ್ಲಿ ಹಲವು ವಿಧದ ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಈ ಹಿಂದೆ ಪ್ರೇಮಿಗಳು, ವಧು-ವರರು, ಸ್ನೇಹಿತರು ಜೊತೆ ಸೇರಿ ನೃತ್ಯ ಮಾಡಿದ ಹಲವಾರು ವಿಡಿಯೊಗಳು ವೈರಲ್ ಆಗಿದ್ದವು. ಇದೀಗ ಎದೆ ಝಲ್ ಎನಿಸುವ ವಿಡಿಯೋ ಒಂದು ವೈರಲ್ ಆಗಿದೆ.
ಹೌದು ದೆಹಲಿ ಮೂಲದ ಫಿಟ್ ನೆಸ್ ಇನ್ಫ್ಲುಯೆನ್ಸರ್ ರೊಬ್ಬರು ಚಲಿಸುವ ರೈಲಿ ಸೆಡ್ಡು ಹೊಡೆದು ಓಟಕ್ಕೆ ಇಳಿದಿದ್ದಾರೆ. ಈ ವಿಡಿಯೋವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೆಹಲಿ ಮೂಲದ ಫಿಟ್‌ನೆಸ್ ಇನ್ಫ್ಲುಯೆನ್ಸರ್ ರೈಲಿನ ಜೊತೆ ಓಡುವ ವಿಡಿಯೋವನ್ನು ಮಾಡಿದ್ದಾರೆ. piku singh ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದಕ್ಕೆ ‘ರೈಲಿನ ಜೊತೆ ಓಡುತ್ತಿದ್ದೇನೆ’ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವಿಡಿಯೋದಲ್ಲಿ ರೈಲು ವೇಗವಾಗಿ ಬರುತ್ತಿರುವುದು ನೋಡಬಹುದು. ಫಿಟ್ ನೆಸ್ ಇನ್ಫ್ಲುಯೆನ್ಸರ್ ರಾದ ಪಿಕು ಸಿಂಗ್ ಈ ರೈಲಿನ ಪಕ್ಕದಲ್ಲಿರುವ ಹಳಿಯ ಮೇಲೆ ಓಡುತ್ತಿದ್ದಾರೆ.
ಆದರೆ ಈ ವಿಡಿಯೋ ಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಆಕೆಯ ಫಿಟ್ನೆಸ್ ಅನ್ನು ಮೆಚ್ಚಿಕೊಂಡರೆ, ಇನ್ನು ಹಲವರು ಈ ಸಾಹಸವನ್ನು ಖಂಡಿಸಿ, ಅದರ ಅಪಾಯಗಳನ್ನು ತಿಳಿಸಿದ್ದಾರೆ.
https://www.instagram.com/reel/DIRAydCyU9d/?igsh=MWhmc3ByZ2t2emxxaw==
https://www.newsics.com/2025/04/16/age-relaxation-for-1st-class-admission/