newsics.com
ನವದೆಹಲಿ : ಮೇ 1 ರಿಂದ ವ್ಯವಸ್ಥೆಗಿಂತ ಅತ್ಯಾಧುನಿಕ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಸ್ಯಾಟಲೈಟ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಆರಂಭಗೊಳ್ಳುತ್ತಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ ವ್ಯವಸ್ಥೆಯಲ್ಲಿ ವಾಹನ ಟೋಲ್ ರಸ್ತೆಗೆ ಎಂಟ್ರಿ ಹಾಗೂ ಎಕ್ಸಿಟ್ ಆಧರಿಸಿ ಟೋಲ್ ಶುಲ್ಕ ವಿಧಿಸಲಿದೆ. GNSS ಟೋಲ್ ವ್ಯವಸ್ಥೆ ಅಡಿಯಲ್ಲಿ ಪ್ರತಿ ದಿನ ಟೋಲ್ ರಸ್ತೆಯಲ್ಲಿ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ. ಅಂದರೆ 20 ಕಿಲೋಮೀಟರ್ ಬಳಿಕ ಶುಲ್ಕ ಅನ್ವಯವಾಗುತ್ತದೆ.
ಆರಂಭಿಕ 20 ಕಿಲೋಮೀಟರ್ ಉಚಿತವಾಗರಲಿದೆ ಎಂದು ಗಡ್ಕರಿ ಹೇಳಿದ್ದಾರೆ.ಇದು ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ಹಾಗೂ ಟೋಲ್ ಸಿಸ್ಟಮ್ ಇದಾಗಿದೆ. ಉಪಗ್ರಹ ಮೂಲಕ ವಾಹನ ಟ್ರಾಕ್ ಮಾಡಿ ಶುಲ್ಕ ವಿಧಿಸಲಾಗುತ್ತದೆ.
ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್ ವೇಗೆ ವಾಹನ ಎಂಟ್ರಿಕೊಟ್ಟ ಬೆನ್ನಲ್ಲೇ GNSS ಟ್ರಾಕ್ ಮಾಡಲಿದೆ. ಬಳಿಕ ವಾಹನ ಹೆದ್ದಾರಿಯಿಂದ ಅಂದರೆ ಟೋಲ್ ರಸ್ತೆಯಿಂದ ಎಕ್ಸಿಟ್ ಆಗುವ ವರೆಗಿನ ಕಿಲೋಮಟರ್ ಹಾಗೂ ಹೆದ್ದಾರಿಗೆ ಅನುಗುಣವಾಗಿ ಟೋಲ್ ಶುಲ್ಕ ವಿಧಿಸಲಿದೆ.ವಾಹನದಲ್ಲಿರುವ ಆನ್-ಬೋರ್ಡ್ ಯೂನಿಟ್ ಅಥವಾ GNSS-ಸಕ್ರಿಯಗೊಳಿಸಿದ ಸಾಧನದ ಮೂಲಕ ಟೋಲ್ ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಈ ವ್ಯವಸ್ಥೆ ಜಾರಿಗೆ ಬಂದ ನಂತರ, ಟೋಲ್ ಬೂತ್‌ಗಳಲ್ಲಿ ನಿಲ್ಲುವ ಅಗತ್ಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಹಲವು ಪ್ರದೇಶಗಳಲ್ಲಿ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲಾಗುವುದು.
https://x.com/ians_india/status/1911783099354267878?ref_src=twsrc%5Etfw%7Ctwcamp%5Etweetembed%7Ctwterm%5E1911783099354267878%7Ctwgr%5Eedfd9b7e15d35ae00c3d3a98940648f93e5fee8a%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Fbig-news-good-news-for-motorists-satellite-based-toll-system-to-be-implemented-soon%2Fhttps://www.newsics.com/2025/04/15/you-my-heart-soaked-in-the-rain-wearing-a-saree/