newsics.com
ಭಾರತವು ಸಂಸ್ಕೃತಿ, ಕಲೆ, ಸಂಪ್ರದಾಯ ಅಂತೆಯೇ ರುಚಿಕರ ಆಹಾರಗಳ ನೆಲೆವೀಡಾಗಿದೆ. ಇಲ್ಲಿನ ಕೆಲವು ದೇವಸ್ಥಾನಗಳೂ ಪ್ರಸಾದ ರೂಪದಲ್ಲಿ ಭೋಜನ ಉಣಬಡಿಸುತ್ತವೆ. ಆದರೆ ಈ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮತ್ತು ಮೊಮೊಸ್ ನೀಡುತ್ತಾರೆ.ಹೌದು ಕೋಲ್ಕತ್ತಾದ ಟೆಂಗ್ರಾ ಪ್ರದೇಶದಲ್ಲಿರುವ ಕಾಳಿ ದೇವಾಲಯದಲ್ಲಿ ನೂಡಲ್ಸ್, ಫ್ರೈಡ್ ರೈಸ್ ಮತ್ತು ಮೊಮೊಸ್ಗಳನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.
ಈ ಪ್ರದೇಶವು ಚೈನಾ ಟೌನ್ ಎಂಬ ಹೆಸರಿನಿಂದಲೂ ಬಹಳ ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಚೀನೀ ಕಾಳಿ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯವು 60 ವರ್ಷ ಹಳೆಯದಾಗಿದ್ದು, ದೇವಿಯನ್ನು ಹಿಂದೂಗಳು ಮಾತ್ರವಲ್ಲದೆ ಚೀನೀ ಜನರು ಸಹ ಪೂಜಿಸುತ್ತಾರೆ.
ಹಲವು ವರ್ಷಗಳ ಹಿಂದೆ ಚೀನಾದ ಕುಟುಂಬವೊಂದು ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ 10 ವರ್ಷದ ಮಗುವನ್ನು ಬದುಕಿಸಲು ಇಲ್ಲಿಗೆ ಕರೆತಂದಿದ್ದರು.ವೈದ್ಯರು ತಮ್ಮ ಕೈಲಾದಷ್ಟು ಪ್ರಯತ್ನಿಸಿ, ಮಗು ಬದುಕುವಿದೇ ಕಷ್ಟ ಎಂದು ಹೇಳಿದ್ದರು. ಆ ಸಮಯದಲ್ಲಿ ಈ ಚೀನಿ ಕುಟುಂಬ ತಮ್ಮ ಮಗುವನ್ನು ಈ ಕಾಳಿ ದೇವಿಯ ದೇವಸ್ಥಾನದ ಬಳಿಯ ಮರದ ಕೆಳಗೆ ಬಂಡೆಗಳ ಬಳಿ ಮಲಗಿಸಿ ದೇವಿಯನ್ನು ಪ್ರಾರ್ಥಿಸಿದರು. ಕಾಳಿ ದೇವಿಯು ಅವರ ಪ್ರಾರ್ಥನೆಗಳನ್ನು ಕೇಳಿ ಮಗುವನ್ನು ಮತ್ತೆ ಬದುಕಿಸಿದಳು ಎಂದು ಹೇಳಲಾಗುತ್ತದೆ. ಇಂದು ಆ ಸ್ಥಳದಲ್ಲಿ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ. ಒಂದು ಪ್ರತಿಮೆಯನ್ನೂ ಸ್ಥಾಪಿಸಲಾಯಿತು. ಆದರೆ ಆ ಎರಡು ಕಪ್ಪು ಕಲ್ಲುಗಳು ಇನ್ನೂ ಅದೇ ಸ್ಥಳದಲ್ಲಿವೆ. ಈ ಪ್ರದೇಶದಲ್ಲಿ ಹೆಚ್ಚಾಗಿ ಚೀನಿಯರು ವಾಸಿಸುತ್ತಾರೆ. ಈ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯ ಚೀನಿಯರು ಬರುತ್ತಾರೆ.
https://www.newsics.com/2025/04/10/two-religious-weddings-in-the-same-hall/