newsics.com
ಒಂದೇ ಮಂಟಪದಲ್ಲಿ ಹಿಂದೂ- ಮುಸ್ಲಿಂ ಸ್ನೇಹಿತರ ಮದ್ವೆ. ಒಂದೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಲಾಗಿದ್ದು,ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ.
ಅಬ್ದುಲ್ ರೌಫ್ ಅನ್ಸಾರಿ ಅವರ ಕುಟುಂಬ ಮತ್ತು ವಿಶ್ವಜೀತ್ ಚಕ್ರವರ್ತಿ ಎನ್ನುವವರ ಮದುವೆ ಇದು.ಇವರಿಬ್ಬರು ಬಾಲ್ಯದ ಸ್ನೇಹಿತರು.ರಾಜಸ್ಥಾನದ ಕೋಟಾದಲ್ಲಿ ನಡೆಯುವ ಈ ಮದುವೆಯಲ್ಲಿ, ಒಬ್ಬ ವರ ಮುಸ್ಲಿಂ ಆಗಿದ್ದು, ಇನ್ನೊಬ್ಬ ಹಿಂದೂ ಆಗಿದ್ದಾನೆ. ಮದುವೆ ಒಂದೇ ಮಂಟಪದಲ್ಲಿ ನಡೆಯಲಿದ್ದು, ಒಂದೇ ವೆಡ್ಡಿಂಗ್ ಕಾರ್ಡ್ ಪ್ರಿಂಟ್ ಮಾಡಲಾಗಿದೆ.ಅಕ್ಕಪಕ್ಕದಲ್ಲಿಯೇ ಅವರ ಮದುವೆಯ ಬಗ್ಗೆ ಡಿಟೇಲ್ಸ್ ಇದೆ. ಎರಡೂ ಕುಟುಂಬಗಳು ಬೇರೆ ಬೇರೆ ಧರ್ಮಗಳಿಗೆ ಸೇರಿದವು ಆದರೆ ಅವರ ಮಕ್ಕಳನ್ನು ಒಂದೇ ಸ್ಥಳದಲ್ಲಿ ಮದುವೆ ಮಾಡುತ್ತಿರುವ ಗಮಹರ್ನಿವಾಗಿದೆ.
ಈ ಕಾರ್ಡ್ನ ಒಂದು ಬದಿಯಲ್ಲಿ ಹಿಂದಿಯಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ಉರ್ದು ಭಾಷೆಯಲ್ಲಿ ಮುದ್ರಿಸಲಾಗಿದ್ದು, ಅದಕ್ಕೆ “ಉತ್ಸವ್ ಇ ಶಾದಿ” ಎಂದು ಹೆಸರಿಸಲಾಗಿದೆ.ಕಾರ್ಡ್ನಲ್ಲಿರುವ ಒಂದು ಕುಟುಂಬ ಅಬ್ದುಲ್ ರೌಫ್ ಅನ್ಸಾರಿಯದ್ದು ಮತ್ತು ಇನ್ನೊಂದು ಕುಟುಂಬವು ವಿಶ್ವಜಿತ್ ಚಕ್ರವರ್ತಿಯದ್ದು.ಅವರಿಬ್ಬರ ಗಂಡು ಮಕ್ಕಳೂ ಮದುವೆ ಆಗುತ್ತಿದ್ದಾರೆ.ಅಬ್ದುಲ್ ರವೂಫ್ ಅನ್ಸಾರಿ ಅವರ ಪುತ್ರ ಯೂನಸ್ ಪರ್ವೇಜ್ ಅನ್ಸಾರಿ ಅವರ ವಿವಾಹ ಏಪ್ರಿಲ್ 17 ರಂದು ನಡೆಯಲಿದ್ದರೆ, ವಿಶ್ವಜಿತ್ ಚಕ್ರವರ್ತಿ ಅವರ ಪುತ್ರ ಸೌರಭ್ ಅವರ ವಿವಾಹ ಏಪ್ರಿಲ್ 18 ರಂದು ನಡೆಯಲಿದೆ. ಎರಡೂ ಕುಟುಂಬಗಳ ಆರತಕ್ಷತೆ ಚಂದ್ರಶೀಲ್ ರಸ್ತೆಯ ಕಲಾ ತಲಾಬ್ನಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ನಡೆಯಲಿದೆ. ಇದರ ದಿನಾಂಕ ಏಪ್ರಿಲ್ 19. ಅದಕ್ಕೆ ‘ದಾವತ್ ಇ ಖುಷಿ’ ಎಂದು ಹೆಸರಿಡಲಾಗಿದೆ.ನಂತರ ಎರಡೂ ಕುಟುಂಬಗಳ ಆರತಕ್ಷತೆ ಒಂದೇ ರೆಸಾರ್ಟ್ನಲ್ಲಿ ನಡೆಯಲಿದೆ. ಅದಕ್ಕೆ ‘ದಾವತ್ ಎ ಖುಷಿ’ ಎಂದು ಹೆಸರಿಡಲಾಯಿತು.
https://www.newsics.com/2025/04/10/lovers-lock-lips-while-riding-a-bike/