newsics.com
ದಾವಣಗೆರೆ: ಪತ್ನಿ ಸಾವಿನಿಂದ ಮನನೊಂದು ಗಂಡ ತನ್ನಿಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಎಸ್‌ಪಿಎಸ್ ನಗರದಲ್ಲಿ ನಡೆದಿದೆ.
ಮಕ್ಕಳಾದ ಸಿಂಧುಶ್ರೀ(4), ಶ್ರೀಜಯ್(3)ನನ್ನು ಕೊಲೆಗೈದು ಬಳಿಕ ತಂದೆ ಉದಯ್(35) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.ಕೆಲ ತಿಂಗಳ ಹಿಂದೆ ಅಷ್ಟೇ ಉದಯ್ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಪತ್ನಿ ಸಾವಿನಿಂದ ಬೇಸತ್ತು ಪತಿ ಉದಯ್ , ಇಂದು ಮಕ್ಕಳನ್ನು ಸಾಯಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ನೇಣಿಗೆ ಶರಣಾಗುವ ಮೊದಲು ರಕ್ತದಲ್ಲಿ ಐಲವ್ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆ ಮೇಲೆ ಬರೆದಿದ್ದಾರೆ.
https://www.newsics.com/2025/04/10/two-religious-weddings-in-the-same-hall/