newscis.com
ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವುರ್ ರಾಣಾನನ್ನು ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಯಿತು.
ರಾಣಾ ಇದ್ದ ವಿಶೇಷ ವಿಮಾನ ಗುರುವಾರ ಮಧ್ಯಾಹ್ನ 3 ಗಂಟೆಗೆ ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಿದೆ. ದೆಹಲಿಯಲ್ಲಿ ಎನ್‌ಐಎ ಬಂಧನ ಪ್ರಕ್ರಿಯೆ ನಡೆಸಿದೆ. ಸ್ಥಳದಲ್ಲಿ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿದೆ.
2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯ ರೂವಾರಿಯೇ ಈ ತಹವ್ವೂರ್ ರಾಣಾ. ಭಾರತದ ಮೋಸ್ಟ್ ವಾಂಟೆಡ್ ಈ ಉಗ್ರ, ಪಾಕಿಸ್ತಾನದಿಂದ ಕೆನಡಾಗೆ ಹೋಗಿ ನೆಲೆಸಿದ್ದ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಅಮೆರಿಕಾ ಆತನನ್ನು ಬಂಧಿಸಿತ್ತು. ಸದ್ಯ ಭಾರತ ಸರ್ಕಾರದ ಮನವಿ ಹಾಗೂ ದ್ವಿಪಕ್ಷೀಯ ಮಾತುಕತೆಗಳ ಫಲವಾಗಿ ಅಮೆರಿಕಾ ರಾಣಾನನ್ನು ಗಡಿಪಾರು ಮಾಡಿದೆ. ಈ ಹಿನ್ನೆಲೆ ಈತನನ್ನು ಭಾರತಕ್ಕೆ ಶಿಫ್ಟ್ ಮಾಡಲಾಗಿದೆ. ಅಮೆರಿಕಾದ ಸುಪ್ರೀಂಕೋರ್ಟ್ ಅನುಮತಿ ಪಡೆದುಕೊಂಡು ಈತನನ್ನು ಭಾರತಕ್ಕೆ ಎಳೆದುಕೊಂಡು ಬರಲಾಗಿದೆ.
https://www.newsics.com/2025/04/10/where-did-the-first-bus-service-start-in-india/