newsics.com
ಭಾರತದಲ್ಲಿ ಹಲವು ಸಾರಿಗೆ ವಿಧಾನಗಳಿವೆ, ಅವುಗಳಲ್ಲಿ ಬಸ್ ಪ್ರಯಾಣವು ಒಂದು ಪ್ರಮುಖ ಸಾಧನವಾಗಿದೆ. ಹಳ್ಳಿಗಳಿಂದ ಪಟ್ಟಣಗಳು ಅಥವಾ ಮಹಾನಗರಗಳವರೆಗೆ, ಎಲ್ಲವೂ ಈ ಸಾಧನದ ಮೂಲಕ ಸಂಪರ್ಕ ಹೊಂದಿವೆ.ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿರುವ ಏಕೈಕ ಸಾರಿಗೆ ವ್ಯವಸ್ಥೆ ಬಸ್ಸುಗಳು.
ಹಾಗಾದ್ರೆ ಭಾರತದಲ್ಲಿ ಮೊಟ್ಟ ಮೊದಲು ಬಸ್ ಪ್ರಯಾಣ ಮಾಡಿದ್ದು ಎಲ್ಲಿ ಅಂತ? ಮತ್ತು ಅದು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಿತ್ತು ಅಂತಾ?
ಭಾರತದ ಮೊದಲ ಬಸ್ ಸಾರಿಗೆಯನ್ನು ಬಾಂಬೆ ಇಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ಪೋರ್ಟ್ ಸಂಸ್ಥೆ ಅಂದ್ರೆ BEST ಸಂಸ್ಥೆ ಈ ಜುಲೈ 15, 1926ರಲ್ಲಿ ಬಸ್ ಸೇವೆಯನ್ನು ಆರಂಭ ಮಾಡಿತ್ತು.
ಮಹಾರಾಷ್ಟ್ರದ ಮುಂಬೈನಲ್ಲಿ ಈ ಬಸ್ ಮೊದಲ ಬಾರಿ ಸೇವೆ ನೀಡಲು ಆರಂಭ ಮಾಡಿತ್ತು. ಮೊದಲ ಪ್ರಯಾಣ ಕೋಲಬಾದಿಂದ ಜ್ಯೋತಿಬಾ ಪುಳೆ ಮಾರ್ಕೆಟ್ವರೆಗೂ ಈ ಬಸ್ ಸಂಚಾರ ಮಾಡಿತ್ತು. ಮತ್ತು ಆ ಸಮಯದಲ್ಲಿ ಟಿಕೆಟ್ ದರ ಕೇವಲ ನಾಲ್ಕು ಆಣೆ ಇತ್ತು.
ಕೇವಲ ಇಷ್ಟು ಮಾತ್ರವಲ್ಲ ಭಾರತದ ಸ್ವತಂತ್ರಪೂರ್ವದಲ್ಲಿಯೇ ಅಂದರೆ 1937ರಲ್ಲಿಯೇ ಡಬಲ್ ಡೆಕ್ಕರ್ ಬಸ್ ಸರ್ವಿಸ್ ಶುರು ಆಗಿತ್ತು.
https://www.newsics.com/2025/04/10/now-school-fees-have-also-increased/