newsics.com
ತಾವು ಪ್ರೀತಿಸಿದ ಹುಡುಗಿಗಾಗಿ ಏನು ಬೇಕಾದ್ರೂ ಮಾಡಲು ಸಿದ್ದರಾಗಿರುತ್ತಾರೆ. ಪ್ರೀತಿಗೆ ಕಣ್ಣಿಲ್ಲ ಅಂತಾರೆ ಏನು ಬೇಕಾದರೂ ಮಾಡ್ತಾರೆ ಅಂತಾರೆ. ಆದರೆ l ಇಲ್ಲೊಬ್ಬ ತನ್ನ . ಗೆಳತಿ ಐಫೋನ್ ಕೇಳಿದ್ದಾಳೆ ಅಂತ ತನ್ನ ಕಿಡ್ನಿ ಮಾರಿ ತಂದುಕೊಟ್ಟಿದ್ದಾನೆ.
ಹೌದು ದೆಹಲಿಯ ಈ ಯುವಕ ತನ್ನ ಗೆಳತಿಗೆ ಐಫೋನ್ ಕೊಡಿಸಲು ತನ್ನ ಕಿಡ್ನಿ ಮಾರಿದ್ದಾನೆ. ಗೆಳತಿ ನನಗೆ ಐಫೋನ್ ಬೇಕು ಎಂದು ಕೇಳಿದ್ಲಂತೆ. ಅದಕ್ಕೆ ಈತ ತನ್ನ ಒಂದು ಕಿಡ್ನಿ ಮಾರಿ ಗೆಳತಿಗೆ ಐಫೋನ್ 16 ಪ್ರೊ ಕೊಡಿಸಿದ್ದಾನೆ. ಇದಾದ ನಂತರ, ಆ ಯುವಕ ಮೆಟ್ರೋ ನಿಲ್ದಾಣದ ಬಳಿ ನಡೆದುಕೊಂಡು ಹೋಗುವಾಗ, ಇದನ್ನು ಅವರ ಸ್ನೇಹಿತರೊಬ್ಬರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಆ ಹುಡುಗ ನಗುತ್ತಿರೋದನ್ನು ಕಾಣಬಹುದು. ಆ ವ್ಯಕ್ತಿ ತನ್ನ ಗೆಳತಿಯನ್ನು ಮೆಚ್ಚಿಸಲು ಎಲ್ಲಾ ಮಿತಿಗಳನ್ನು ದಾಟಿದ್ದಾನೆ ಎನ್ನಲಾಗಿದೆ. ಆ ವ್ಯಕ್ತಿ ತನ್ನ ಗೆಳತಿಗೆ ಐಫೋನ್ 16 ಪ್ರೊ ಉಡುಗೊರೆಯಾಗಿ ನೀಡಲು ಬಯಸಿದ್ದ. ಆದರೆ ಅವನ ಬಳಿ ಇದಕ್ಕೆ ಹಣವಿರಲಿಲ್ಲ. ಹೀಗಾಗಿ ಈ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ.
https://www.instagram.com/reel/DIGHUrgI8ar/?igsh=ZnZvcjQ0YW5kdDMw
https://www.newsics.com/2025/04/10/young-man-puts-live-fish-in-his-mouth/