newsics.com
ಪಾಕಿಸ್ತಾನವನ್ನು ಸಂಪೂರ್ಣವಾಗಿ ಹಿಂದಿಕ್ಕಲು ಬಾಂಗ್ಲಾದೇಶ ಪ್ರಯತ್ನಿಸುತ್ತಿದೆ. ಮನೆ ಬಳಿಯೇ ಏರ್‌ಕ್ರಾಫ್ಟ್ ತೆಗೆದುಕೊಂಡು ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತದೆ. ವಿಮಾನದ ರೀತಿಯ ವಾಹನವೊಂದು ಮನೆ ಬಾಗಿಲಿನವರೆಗೂ ಬರುತ್ತದೆ. ಇದರ ಹಿಂದೆಯೇ ಸೈಕಲ್ ಬರೋದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಓರ್ವ ಬಂದು ಬಾಗಿಲು ತೆಗೆಯುತ್ತಿದ್ದಂತೆ ಒಳಗಿದ್ದ ಜನರು ಹೊರ ಬರುತ್ತಾರೆ. ಅರೇ ಇದ್ಯಾವ ಊರು? ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ವಿಮಾನವಲ್ಲ, ಆಟೋ ಎಂದು ಹೇಳಿದ್ದಾರೆ. ಈ ಪ್ಲಾನ್ ಪಾಕಿಸ್ತಾನದವರನ್ನು ಮೀರಿಸಿದ ಪ್ಲಾನ್ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
ಪ್ಲೇನ್ ಚಕ್ರಗಳನ್ನು ನೋಡಿ
ವೈರಲ್ ಆಗಿರುವ ಈ ವಿಡಿಯೋವನ್ನು @pratapkhuraw ಹೆಸರಿನ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಇದುವರೆಗೂ 1.5 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿವೆ.