newsics.com
ದಾವಣಗೆರೆ : ಹಕ್ಕಿಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕನೊಬ್ಬನನ್ನು ಕಳ್ಳತನದ ಆರೋಪದ ಮೇಲೆ ಬೆತ್ತಲೆಗೊಳಿಸಿ ಕಟ್ಟಿಹಾಕಿದ್ದಲ್ಲದೇ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನಡೆಸಿರುವ ಘಟನೆ ದಾವಣಗೆರೆಯ ಚೆನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ನಡೆದಿದೆ.
ಸದ್ಯಕ್ಕೆ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳ ವಿರುದ್ದ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತೋಟವೊಂದರಲ್ಲಿ ನಡೆದಿರುವ ಈ ಘಟನೆಯಲ್ಲಿ ಸುಮಾರು 10-15 ಯುವಕರು ಬಾಲಕನಿಗೆ ದೊಣ್ಣೆ, ಡ್ರಿಪ್ ಪೈಪ್ ಅಲ್ಲದೇ ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಬಳಿಕ ಅವನನ್ನು ಬೆತ್ತಲೆಗೊಳಿಸಿ ಅಡಿಕೆ ಮರಕ್ಕೆ ಕಟ್ಟಿಹಾಕಿದ್ದಾರೆ. ಈ ವೇಳೆ ಬಾಲಕ ಪ್ರಾಣಭಯದಿಂದ ಚೀರಾಡುತ್ತಿದ್ದರೂ ಸಹ ಬಿಡದೆ ಆತನ ಮೇಲೆ ಕೆಂಪಿರುವೆ ಬಿಟ್ಟು ವಿಕೃತಿ ಮೆರೆಯಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Karnataka Weather: 13 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ