newsics.com
ಹುಟ್ಟುವ ಪ್ರತಿ ಹೆಣ್ಣು ಮತ್ತೊಂದು ಜೀವನ ರೂಪಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತಾಳೆ. ತನ್ನ ಗರ್ಭದ ಮೂಲಕ ಹೊಸ ಜೀವನವೊಂದು ರೂಪಗೊಂಡು ಭೂಮಿಗೆ ಬರುವವರೆಗಿನ ಸಂಪೂರ್ಣ ಪ್ರಕ್ರಿಯೆ ಹೆಣ್ಣಿಗೆ ಮಾತ್ರ ಮುಡಿಪಾಗಿದೆ. ಈ ಪ್ರಕ್ರಿಯೆಗೆ ಹೆಣ್ಣು ಸಜ್ಜಾಗುವಂತೆ ಆಕೆಯ ಶರೀರದಲ್ಲಿ ನಡೆಯುವ ಬದಲಾವಣೆಯೇ ಋತುಚಕ್ರ ಅಥವಾ ಮುಟ್ಟು. ಮುಟ್ಟು ಎಂಬುದು ಸ್ವಾಭಾವಿಕವಾದ, ಸಹಜವಾದ ಒಂದು ಶಾರೀರಿಕ ಪ್ರಕ್ರಿಯೆಯಾಗಿದೆ. ಪ್ರತಿ
ಪಿರಿಯಡ್ಸ್ ಬಗ್ಗೆ ಕಲಿಯಲು ಬಹಳಷ್ಟಿದೆ. ಏಕೆಂದರೆ ಮುಟ್ಟಿನ ಬಗ್ಗೆ ಬಹಳಷ್ಟು ಹುಡುಗಿಯರಿಗೆ ಅವಶ್ಯಕವಾದ ಪ್ರಮಾಣದಷ್ಟು ತಿಳುವಳಿಕೆಯಾಗಲಿ ಅವುಗಳಿಂದುಂಟಾಗುವ ಸಮಸ್ಯೆಗಳ ಬಗ್ಗೆಯಾಗಲಿ ತಿಳಿದಿರುವುದಿಲ್ಲ. ಹಾಗಾಗಿ ಇಂದಿಗೂ ಸಾಕಷ್ಟು ಹೆಣ್ಣು ಮಕ್ಕಳು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಮುಟ್ಟಿನ ಸಾಕಷ್ಟು ಸಮಸ್ಯೆಗಳನ್ನು .ಅನುಭವಿಸುತ್ತಿರುತ್ತಾರೆ. ಕೆಲವರು ಬೇಗ ಮುಟ್ಟಾಗಲು ಮಾತ್ರೆಗಳನ್ನು ತಿನ್ನುತ್ತಾರೆ. ಮನೆಯಲ್ಲಿ ಶುಭ ಕಾರ್ಯವಿದ್ದಾಗ ಅದಕ್ಕಿಂತ ಮುಂಚೆ ಮುಟ್ಟಾಗಲು ಮಾತ್ರಗಳನ್ನು ಸೇವಿಸುತ್ತಾರೆ. ಆದರೆ ಇವು ಆರೋಗ್ಯಕ್ಕೆ ಮಾರಕ. ಹಾಗಾಗಿ ಕೆಲವು ಆಹಾರಗಳು ಸೇವಿಸಿದರೆ ಬೇಗ ಮುಟ್ಟಾಗಬಹುದು.
ಪಪ್ಪಾಯ ಹಣ್ಣು
ಪಪ್ಪಾಯಿ ಸೇವಿಸಿದರೆ ಋತುಚಕ್ರ ಆಗುವುದರ ಬಗ್ಗೆ ನೀವು ಕೇಳಿರಬಹುದು. ಹಣ್ಣಾದ ಪಪ್ಪಾಯಿಯನ್ನು ಕತ್ತರಿಸಿ ನೇರವಾಗಿ ಸೇವಿಸಬಹುದು. ಇಲ್ಲವಾದರೆ ನೀವು ಪಪ್ಪಾಯಿಯನ್ನು ಇತರ ಹಣ್ಣುಗಳೊಂದಿಗೆ ಸೇವಿಸಬಹುದು. ಇಲ್ಲವಾದರೆ ಪಪ್ಪಾಯಿ ಜ್ಯೂಸ್ ಮಾಡಿ ಕುಡಿಯಬಹುದು. ನಿಮ್ಮ ಋತುಚಕ್ರಕ್ಕೂ ಕೆಲವು ದಿನ ಮುಂಚಿತವಾಗಿ ದಿನಕ್ಕೆ ಒಮ್ಮೆ ಪಪ್ಪಾಯಿ ಜ್ಯೂಸ್ ಕುಡಿಯಬೇಕು.
ಎಳ್ಳು
ಎಳ್ಳಿನ ಸೇವನೆಯು ಪಿರಿಯೆಡ್ಸ್ ಬೇಗ ಆಗುವ ಹಾಗೆ ಮಾಡುತ್ತದೆ. ಎಳ್ಳು ದೇಹಕ್ಕೆ ತಂಪಾಗಿರುವುದರಿಂದ ಎಳ್ಳನ್ನು ಸೇವಿಸುವುದರಿಂದ ಪಿರಿಯೆಡ್ಸ್ ಬೇಗನೆ ಆಗುತ್ತದೆ ಎನ್ನಲಾಗುತ್ತದೆ.
ಅನಾನಸ್
ಅನಾನಸ್‌ಗಳು ಮಹಿಳೆಯರಲ್ಲಿ ಗರ್ಭಾಶಯದ ಸಂಕೋಚನವನ್ನು ಉಂಟುಮಾಡಬಹುದು . ಇದರಿಂದ ನಿಮ್ಮ ಪಿರಿಯೆಡ್ಸ್ ವೇಗವಾಗಿ ಬರಲು ಕಾರಣವಾಗುತ್ತದೆ. ನಿಮ್ಮ ಋತುಚಕ್ರದ ಅವಧಿಗೆ ಮೊದಲು ಒಂದು ಬೌಲ್ ಅನಾನಸ್ ಅನ್ನು ಸೇವಿಸಲು ಆರಂಭಿಸಿ.
ದಾಳಿಂಬೆ
ದಾಳಿಂಬೆ ಋತುಚಕ್ರದ ಹಂತ ಹಂತದ ಚಟುವಟಿಕೆಯನ್ನು ನಿಯಂತ್ರಿಸುತ್ತದೆ. ಋತುಚಕ್ರವನ್ನು ಪ್ರಚೋದಿಸುತ್ತದೆ.
ಪಿರಿಯೆಡ್ಸ್ ಬೇಗ ಆಗಲು ಪಿರಿಯೆಡ್ಸ್‌ಗೂ ಎರಡು ವಾರ ಮುಂಚಿತವಾಗಿ ದಾಳಿಂಬೆಯನ್ನು ಸೇವಿಸಬೇಕು. ಅಥವಾ ದಾಳಿಂಬೆ ಜ್ಯೂಸ್ ಕುಡಿಯಬೇಕು.
ಶುಂಠಿ
ಶುಂಠಿಯು ಜೈವಿಕ ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ, ಅದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಪಿರಿಯೆಡ್ಸ್‌ನ್ನು ಅವಧಿಗೂ ಮುಂಚಿತವಾಗಿ ಆಗುವಂತೆ ಮಾಡುತ್ತದೆ.