newsics.comಗುಜರಾತ್: ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಅಪಘಾತಕ್ಕೀಡಾಗಿದ್ದು, ಒಬ್ಬ ಪೈಲಟ್ ಸಾವನ್ನಪ್ಪಿರುವ ಘಟನೆ ಗುಜರಾತ್ನ ಜಾಮ್‌ನಗರದಲ್ಲಿ ನಡೆದಿದೆ. ಮತ್ತೊಬ್ಬ ಪೈಲಟ್ ನನ್ನು ರಕ್ಷಿಸಲಾಗಿದೆ. ಜಾಮ್‌ನಗರ ನಗರದಿಂದ 12 ಕಿ.ಮೀ ದೂರದಲ್ಲಿರುವ ಸುವರ್ದಾ ಗ್ರಾಮದ ಬಳಿ ಈ ಘಟನೆ ನಡೆದಿದೆ.ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು ಎಂದು ಜಾಮ್‌ನಗರ ಎಸ್‌ಪಿ ಪ್ರೇಮ್‌ಸುಖ್ ದೇಲು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ, ಒಬ್ಬ ಪೈಲಟ್ ವಿಮಾನದಿಂದ ಜಿಗಿದಿದ್ದು, ಮತ್ತೊಬ್ಬ ಪೈಲಟ್ ಸಾವನ್ನಪ್ಪಿದ್ದಾರೆ. ಗಾಯಗೊಂಡ ಪೈಲಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೀಡಾಗಿದೆ.
https://x.com/ANI/status/1907484436339233251
https://www.newsics.com/2025/04/03/leopard-enters-house-in-bengaluru-locked/