newsics.com
ದಾವಣಗೆರೆ: ಚಿನ್ನದಂಗಡಿಯಲ್ಲಿ ಕಳ್ಳಿಯರು ಕೈಚಳಕ ತೋರಿಸಿದ್ದು, ಸುಮಾರು 1.13 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು ಪರಾರಿಯಾಗಿರುವ ಘಟನೆ ನಗರದ ಮಂಡಿ ಪೇಟೆಯಲ್ಲಿ ನಡೆದಿದೆ.
ಬುರ್ಖಾ ಧರಿಸಿ ಬಂದಿದ್ದ ಐವರು ಕಳ್ಳಿಯರು ಅಂಗಡಿಗೆ ಬೆಳ್ಳಿ ಲೋಟ ಖರೀದಿಸುವ ನೆಪದಲ್ಲಿ ಬಂದಿದ್ದರು. ಈ ವೇಳೆ, ಅಂಗಡಿಯ ಕೆಲಸದವರ ಗಮನ ಬೇರೆಡೆ ಸೆಳೆದು, 1 ಕೆಜಿ 400 ಗ್ರಾಂ ಬಂಗಾರದ ಆಭರಣಗಳಿದ್ದ ಬಾಕ್ಸ್‌ನ್ನು ಕದ್ದು ಪರಾರಿಯಾಗಿದ್ದಾರೆ.
ಬಾಕ್ಸ್‌ನಲ್ಲಿ ಕಿವಿ ಓಲೆ, ಜುಮುಕಿ ಹಾಗೂ ಬೆಲೆಬಾಳುವ ಆಭರಣಗಳಿದ್ದವು. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.newsics.com/2025/04/03/jaguar-fighter-jet-crashes-in-gujarat-pilot-killed/