newsics.com
ಗುಜರಾತ್: ಪತ್ನಿಯ ಖಾಸಗಿ ಫೋಟೊಗಳನ್ನಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಕೊಂದು 9 ತುಂಡುಗಳಾಗಿ ದೇಹವನ್ನು ಕತ್ತರಿಸಿ, ವಿವಿಧೆಡೆ ಎಸೆದ ಘಟನೆ ಗುಜರಾತ್ನಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಶೈಲೇಂದ್ರ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭರೂಚ್ನ ವಿವಿಧ ಪ್ರದೇಶಗಳಲ್ಲಿ ದೇಹದ ವಿವಿಧ ಭಾಗಗಳು ಪತ್ತೆಯಾಗಿದ್ದವು. ಶೈಲೇಂದ್ರ ತನ್ನ ಸ್ನೇಹಿತ ಸಚಿನ್ನನ್ನು ಕೊಲೆ ಮಾಡಿ, ಗುರುತು ಹಿಡಿಯದಂತೆ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಮಾರ್ಚ್ 29ರಂದು ಭರೂಚ್ನ ಚರಂಡಿಯಲ್ಲಿ ವ್ಯಕ್ತಿಯ ತಲೆ ಪತ್ತೆಯಾಗಿತ್ತು, ಮುಂದಿನ ಮೂರು ದಿನಗಳಲ್ಲಿ ವಿವಿಧ ಸ್ಥಳಗಳಲ್ಲಿ ಮಾನವ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಯಿತು. ಆತನ ಕೈಯಲ್ಲಿರುವ ಹಚ್ಚೆಯಿಂದ ಆತ ಸಚಿನ್ ಚೌಹಾಣ್ ಎಂದು ಗುರುತಿಸಿದ್ದಾರೆ.