newsics.com
ಆಧುನಿಕ ಕಾಲದಲ್ಲಿ ಕ್ಯಾನ್ಸರ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.. ಈ ರೋಗವು ಚಿಕ್ಕವರಿಂದ ಹಿಡದು ಎಲ್ಲರನ್ನೂ ಬಾಧಿಸುತ್ತಿದೆ. ಇಲ್ಲಿಯವರೆಗೆ 200 ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್ ಅನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರಮುಖವಾದದ್ದು ಸ್ತನ ಕ್ಯಾನ್ಸರ್. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಾಮಾನ್ಯವಾಗಿದೆ.
ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ನೆಗೆಟಿವ್ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯನ್ನು ಬೇಗನೆ ಮಾಡಬೇಕಾಗುತ್ತದೆ. ವಿಳಂಬಿಸಿದರೆ ಈ ಕ್ಯಾನ್ಸರ್ನಿಂದ ಸಾಯುವ ಅಪಾಯ ಹೆಚ್ಚು. ಹೀಗಾಗಿ ವಿಳಂಬವಾದಂತೆ ಗಮನಹರಿಸಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಒಕ್ಲಹೋಮ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸಂಶೋಧಕರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.
ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್, HER2- ನೆಗೆಟಿವ್ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆಯನ್ನು 42 ದಿನಗಳಲ್ಲಿ ಮಾಡಬೇಕು. ಇಲ್ಲದಿದ್ದರೆ, 60 ದಿನಗಳ ನಂತರ ಶೇಕಡಾ 21, 90 ದಿನಗಳ ನಂತರ ಶೇಕಡಾ 79 ಮತ್ತು 120 ದಿನಗಳ ಬಳಿಕ ಶೇಕಡಾ 83ರಷ್ಟು ಸಾವಿನ ಅಪಾಯ ಹೆಚ್ಚಾಗುತ್ತದೆ ಎಂಬುದು ಗಮನಾರ್ಹ.
ಇತ್ತೀಚಿನ ಅಧ್ಯಯನಗಳು ಈ ಕ್ಯಾನ್ಸರ್ಗಳಿಗೆ ಚಿಕಿತ್ಸೆಯ ವಿಳಂಬ ಹೆಚ್ಚುತ್ತಿದೆ ಎಂದು ತೋರಿಸುತ್ತವೆ. ಇದು ಕಳವಳಕಾರಿಯಾಗಿದ್ದು, ಕೆಲವೊಮ್ಮೆ ಕ್ಯಾನ್ಸರ್ ರೋಗನಿರ್ಣಯದ ನಂತರ, ಶಸ್ತ್ರಚಿಕಿತ್ಸೆಗೆ ಮುಂಚಿನ ಪ್ರಕ್ರಿಯೆಯು ಹಲವಾರು ದಿನಗಳನ್ನು ತೆಗೆದುಕೊಳ್ಳಬಹುದು. ಆದ್ರೆ, ಕ್ಯಾನ್ಸರ್ ರೋಗಿಗಳು ಮನೆಕೆಲಸಗಳು ಮತ್ತು ಕುಟುಂಬದ ಜವಾಬ್ದಾರಿಗಳ ಹೆಸರಿನಲ್ಲಿ ತಮ್ಮ ಶಸ್ತ್ರಚಿಕಿತ್ಸೆಯ ದಿನಾಂಕವನ್ನು ಮುಂದೂಡಬಹುದು. ಕೆಲವರು ಬೇರೆ ವೈದ್ಯರ ಸಲಹೆ ಪಡೆಯಲು ಕೂಡ ಸಮಯ ತೆಗೆದುಕೊಳ್ಳಬಹುದು.
ಶಸ್ತ್ರಚಿಕಿತ್ಸೆಯ ಬಳಿಕ ಕಿಮೊಥೆರಪಿ ಅಗತ್ಯವಿದ್ದರೆ, ಹೆರಿಗೆಯ ವಯಸ್ಸಿನ ಮಹಿಳೆಯರು ಅಂಡಾಣು ಸಂರಕ್ಷಣೆಯನ್ನು ಪರಿಗಣಿಸಬಹುದು. ಆದರೆ, ಇತ್ತೀಚಿನ ಅಧ್ಯಯನವೊಂದು ಇಂತಹ ಕ್ಯಾನ್ಸರ್ಗಳಿಗೆ ಸಾಧ್ಯವಾದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಿಸುವುದು ಉತ್ತಮ. ಸ್ತನ ಕ್ಯಾನ್ಸರ್ ಇರುವ ಹೆಚ್ಚಿನ ಜನರು 60 ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದು 2022ರಲ್ಲಿ ಕ್ಯಾನ್ಸರ್ ಆಯೋಗವು ಶಿಫಾರಸು ಮಾಡಿದೆ ಎಂದು ಸಂಶೋಧಕರಾದ ಟಕೇಮಿ ತನಕಾ ತಿಳಿಸುತ್ತಾರೆ.
ಕೆಲವರಿಗೆ ಮೊದಲೇ ಶಸ್ತ್ರಚಿಕಿತ್ಸೆ ಬೇಕಾಗಬಹುದು. ಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ಉಂಟಾಗುವ ಭೀಕರ ಪರಿಣಾಮಗಳನ್ನು ಜನರು ಅರ್ಥಮಾಡಿಕೊಳ್ಳಬೇಕು. ಹಾಗಾದರೆ, ಈ ರೀತಿಯ ಕ್ಯಾನ್ಸರ್ಗಳಿಗೆ ಚಿಕಿತ್ಸೆ ವಿಳಂಬವಾದರೆ ಸಾವಿನ ಅಪಾಯ ಏಕೆ ಹೆಚ್ಚಾಗುತ್ತದೆ? ಈಗಾಗಲೇ ಹರಡಿರುವ ಕ್ಯಾನ್ಸರ್ಗಳಿಗಿಂತ ಭಿನ್ನವಾಗಿ, ಅವು ನಿಧಾನವಾಗಿ ಬೆಳೆಯುತ್ತವೆ ಹಾಗೂ ರೂಪಾಂತರಗೊಳ್ಳುವ ಸಾಧ್ಯತೆ ಹೆಚ್ಚು ಎಂಬುದು ಒಂದು ಕಾರಣ. ಬಯಾಪ್ಸಿಯಿಂದ ಉಂಟಾಗುವ ಉರಿಯೂತದ ಪ್ರತಿಕ್ರಿಯೆಯು ಗೆಡ್ಡೆ ಬೆಳೆಯಲು ಕಾರಣವಾಗಬಹುದು ಎಂದು ಸಂಶೋಧಕರು ವಿವರಿಸಿದ್ದಾರೆ.
Harassment ಮದುವೆಯಾಗುವಂತೆ ಪಾಗಲ್ ಪ್ರೇಮಿ ಹುಚ್ಚಾಟ: ಆತ್ಮಹತ್ಯೆಗೆ ಯತ್ನಿಸಿದ ಯುವತಿ