newsics.com
ವಿವಾದಿತ ಹಾಗೂ ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಆಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಏಪ್ರಿಲ್ 4ರವರೆಗೆ ಸಂಸತ್‌ನ ಬಜೆಟ್ ಅಧಿವೇಶನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿ ಏಪ್ರಿಲ್ 4ರೊಳಗೆ ರಾಜ್ಯಸಭೆಯಲ್ಲೂ ವಕ್ಛ್ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಸಂಸತ್ತಿನ ಸಭೆಯ ನಂತರ ಮಸೂದೆಯನ್ನು ಮಂಡಿಸುವ ಸಮಯವನ್ನು ನಿರ್ಧರಿಸಲಾಗುವುದು ಎಂದು ಕಿರಣ್ ರಿಜಿಜು ಹೇಳಿದರು.
ಅವರು ಅದನ್ನು ಆದಷ್ಟು ಬೇಗ ಅಂಗೀಕರಿಸಬೇಕೆಂದು ಬಯಸುತ್ತಾರೆ. ಮಸೂದೆಯನ್ನು ಮಂಡಿಸುವ ಸಮಯದ ಕುರಿತು ಮಂಗಳವಾರ ವಿವಿಧ ಪಕ್ಷಗಳ ನಾಯಕರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಸರ್ಕಾರ ಸೂಚಿಸಿದೆ. ಇದಾದ ನಂತರ ಬುಧವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ.
https://www.newsics.com/2025/04/01/mysterious-sound-earth-shaking-felt-in-vijayapura/