newsics.com
ನಟ ಮಹೇಶ್ ಬಾಬುಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಬಗ್ಗೆ ಇರುವಷ್ಟೇ ಕ್ರೇಜ್ ಅವರ ಮಕ್ಕಳ ಮೇಲೂ ಇದೆ.
ಸಿತಾರಾ ಅವರು ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾರೆ. ಈ ವೇಳೆ ಅವರು ದೇವತೆಯಂತೆ ಕಾಣಿಸಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ.
ಸಿತಾರಾ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಇದರಲ್ಲಿ ಹಲವು ಸೆಲೆಬ್ರಿಟಿಗಳ ಸಂದರ್ಶನ ಮಾಡಿದ್ದಾರೆ. ಇನ್ನು, ಸಿತಾರಾ ಅವರು ‘ಸರ್ಕಾರು ವಾರಿ ಪಾಟ’ ಚಿತ್ರದ ಪ್ರಮೋಷನಲ್ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.
ಸಿತಾರಾ ಘಟ್ಟಮನೇನಿ ಅವರು ಇತ್ತೀಚೆಗೆ ತಾಯಿ ನಮ್ರತಾ ಜೊತೆ ಬ್ರ್ಯಾಂಡ್ ಪ್ರಮೋಷನ್ ಒಂದಕ್ಕೆ ಬಂದಿದ್ದಾರೆ. ಈ ವೇಳೆ ಅವರು ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ. ಅವರ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಸಿತಾರಾ ಅವರ ಬ್ಯೂಟಿಯನ್ನು ಮೆಚ್ಚಿದ್ದಾರೆ. ಇನ್ನೂ ಕೆಲವರು ಅವರನ್ನು ಶ್ರೀಲೀಲಾಗೆ ಹೋಲಿಕೆ ಮಾಡಿದ್ದು, ‘ಜೂನಿಯರ್ ಶ್ರೀಲೀಲಾ’ ಎಂದು ಕರೆದಿದ್ದಾರೆ.
https://www.instagram.com/reel/DH0KHBjz2zo/?igsh=MXRhM3N4a29iZ3Z1aw==
Viral video ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ತೂರಾಡಿದ ಕಾಲೇಜು ಪ್ರಾಧ್ಯಾಪಕ: ವೈರಲ್ ವಿಡಿಯೋ ನೋಡಿ