newsics.com
ಅಕ್ಷಯ್ ಖನ್ನಾ ಒಂದು ದಿನದ ಹಿಂದೆಯಷ್ಟೇ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 1975 ರಲ್ಲಿ ಮುಂಬೈನಲ್ಲಿ ಜನಿಸಿದರು.
ಅಕ್ಷಯ್ ಖನ್ನಾ ಬಾಲಿವುಡ್‌ನ ಸೂಪರ್‌ಸ್ಟಾರ್ ವಿನೋದ್ ಖನ್ನಾ ಅವರ ಪುತ್ರ. ಇತ್ತೀಚೆಗೆ ವಿಕ್ಕಿ ಕೌಶಲ್ ಅವರ ಛಾವಾ ಚಿತ್ರದಲ್ಲಿ ಅಕ್ಷಯ್ ಔರಂಗಜೇಬ್ ಪಾತ್ರವನ್ನು ಮಾಡಿದ್ದರು.
50 ವರ್ಷ ವಯಸ್ಸಿನಲ್ಲೂ ಅಕ್ಷಯ್ ಖನ್ನಾ ಇನ್ನೂ ಬ್ರಹ್ಮಚಾರಿ. ಆದರೆ ಅವರ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿರುವ ಒಂದು ವಿಷಯವೆಂದರೆ ಅವರು ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಲು ಹೊರಟಿದ್ದರು.
ಕರೀಷ್ಮಾ ಕಪೂರ್ ಅವರ ತಂದೆ ರಣಧೀರ್ ಕಪೂರ್ ಸ್ವತಃ ವಿನೋದ್ ಖನ್ನಾ ಮನೆಗೆ ಸಂಬಂಧ ಕಳುಹಿಸಿದ್ದರು. ಕರೀಷ್ಮಾ ಕಪೂರ್‌ರನ್ನು ಅಕ್ಷಯ್ ಖನ್ನಾಗೆ ಕೊಟ್ಟು ಮದುವೆ ಮಾಡುವ ಪ್ರಸ್ತಾಪವಾಗಿತ್ತು. ಅವರನ್ನು ಕಪೂರ್ ಕುಟುಂಬದ ಅಳಿಯನನ್ನಾಗಿ ಮಾಡಿಕೊಳ್ಳಬೇಕು ಅನ್ನೋ ಹಂಬಲವಿತ್ತು.
ಆದರೆ, ಅಕ್ಷಯ್ ಖನ್ನಾ ಮತ್ತು ಕರಿಷ್ಮಾ ಕಪೂರ್ ಅವರ ಸಂಬಂಧ ಮುರಿದುಬಿತ್ತು. ಯಾಕೆಂದರೆ, ಕರಿಷ್ಮಾ ಅವರ ತಾಯಿ ಬಬಿತಾ ಅವರಿಗೆ ಈ ಮದುವೆ ಆಗುವುದು ಇಷ್ಟವಿರಲಿಲ್ಲ. ಏಕೆಂದರೆ, ಬಬಿತಾ ತಮ್ಮ ಮಗಳು ಮದುವೆಯಾದ ನಂತರ ತಮ್ಮ ವೃತ್ತಿಜೀವನದಿಂದ ವಿರಾಮ ತೆಗೆದುಕೊಳ್ಳುವುದನ್ನು ಬಯಸಿರಲಿಲ್ಲ. ಇದೇ ಕಾರಣಕ್ಕಾಗಿ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು.
ಅಕ್ಷಯ್ ಖನ್ನಾ ತಮ್ಮ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು – “ನನಗೆ ಮದುವೆಯಾಗಲು ಇಷ್ಟವಿಲ್ಲ. ನನಗೆ ಒಂಟಿಯಾಗಿರಲು ಇಷ್ಟ. ನಾನು ಯಾವುದೇ ಸಂಬಂಧದಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ” ಎಂದಿದ್ದರು.
https://www.newsics.com/2025/03/30/50-year-old-woman-gives-birth-to-14th-child/