newsics.com
ಒಡಿಶಾ:ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದ ಕಾಮಾಕ್ಯಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು, ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಚೌಡವಾರ್ ನಲ್ಲಿ ನಡೆದಿದೆ.
ಕಾಮಾಕ್ಯಾ ಎಕ್ಸ್ ಪ್ರೆಸ್ ರೈಲಿನ 11 ಬೋಗಿಗಳು ಹಳಿತಪ್ಪಿವೆ. ಘಟನೆ ಓರ್ವ ಪ್ರಯಾಣಿಕ ಸಾವನ್ನಪಿದ್ದು, ಹಲವರು ಹಳಿತಪ್ಪಿದ ರೈಲಿನ ಬೋಗಿಯಡಿ ಸಿಲುಕಿಕೊಂಡಿದ್ದಾರೆ.
ರಕ್ಷಣಾ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.