newsics.com
ಬೆಂಗಳೂರು : ಇಂದು ಬಿಬಿಎಂಪಿ 2025 – 26 ನೇ ಸಾಲಿನ ಬಜೆಟ್‌ನ್ನು ಮಂಡನೆ ಮಾಡಲಾಯಿತು. ಅಧಿಕಾರಿಗಳೇ ಬಜೆಟ್ ಮಂಡನೆ ಮಾಡಿದ್ದು ವಿಶೇಷ.
ಬಿಬಿಎಂಪಿ ಇತಿಹಾಸದಲ್ಲೇ ಅತಿ ಹೆಚ್ಚಿನ ಗಾತ್ರದ ಬಜೆಟ್ ಮಂಡನೆ ಇದಾಗಿದೆ. ಇದೇ ಮೊದಲನೇ ಬಾರಿಗೆ 19 ಸಾವಿರದ 927 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಲಾಗಿದೆ. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಅವರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಬಜೆಟ್ ಮಂಡನೆ ಮಾಡಿದ್ದಾರೆ.
ಬೆಂಗಳೂರಿನ ಹಸಿರು ಹೊದಿಕೆಯನ್ನು ಹೆಚ್ಚಿಸುವತ್ತ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಇಕ್ಕೆಲದಲ್ಲಿ, ಸರ್ಕಾರಿ ತೆರೆದ ಭೂಮಿ, ಕೆರೆಗಳು ಮತ್ತು ಉದ್ಯಾನವನಗಳಲ್ಲಿ ಸಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡುವ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ.
ಬ್ರ್ಯಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮಹತ್ವ ನೀಡಲಾಗಿದೆ. ಬೆಂಗಳೂರು ಪರಿಕಲ್ಪನೆ ಅಡಿಯಲ್ಲಿ ಟ್ರಾಫಿಕ್ ಮುಕ್ತ, ಗ್ರೀನ್ ಸಿಟಿ, ಟೆಕ್, ಶಿಕ್ಷಣ, ಆರೋಗ್ಯ, ರೋಮಾಂಚಕ ಬೆಂಗಳೂರು,ನೀರಿನ ಭದ್ರತೆಗೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ. ಬ್ರ್ಯಾಂಡ್ ಬೆಂಗಳೂರಿಗೆ 1,790 ಕೋಟಿ ವೆಚ್ಚ ಮಾಡಲು ನಿರ್ಧಾರ ಮಾಡಲಾಗಿದೆ.
ಇ- ಖಾತಾದಿಂದ ಅತಿಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಹೊಸ ಜಾಹೀರಾತು ನೀತಿಯಿಂದ 750 ಕೋಟಿ ನಿರೀಕ್ಷೆ ಮಾಡಲಾಗಿದ್ದು, ನಗರ ಯೋಜನೆಯಿಂದ 2 ಸಾವಿರ ಕೋಟಿ ಸಂಗ್ರಹದ ನಿರೀಕ್ಷೆ ಇದೆ. ಇದರ ಜೊತೆಗೆ 5,716 ಕೋಟಿ ಕಂದಾಯ ನಿರೀಕ್ಷೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯ 20 ಲಕ್ಷ ಸ್ವತ್ತುಗಳ ಸರ್ವೇಗೆ ಪ್ರತ್ಯೇಕ ವಿಭಾಗ ಸ್ಥಾಪನೆ ಮಾಡಲಾಗುತ್ತಿದ್ದು, ಪಾಲಿಕೆಯ ಗುತ್ತಿಗೆ ಅವಧಿ ಮುಗಿದ 143 ಆಸ್ತಿಗಳನ್ನ ಹರಾಜು ಮೂಲಕ ಗುತ್ತಿಗೆ ನೀಡಲು ಪ್ಲಾನ್ ರೂಪಿಸಲಾಗಿದೆ. ಅಲ್ಲದೆ ಜಾಹೀರಾತು ನೀತಿಯಿಂದ ಪಾಲಿಕೆ ಆದಾಯ ಏರಿಕೆ ಪ್ಲಾನ್ ಸಹ ಇದೆ. ಅನಧಿಕೃತ ಜಾಹೀರಾತಿಗೆ ಬ್ರೇಕ್ ಹಾಕಲು ಹೊಸ ನಿಯಮ ಜಾರಿ ಇದರಿಂದ 750 ಕೋಟಿ ಆದಾಯ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ನಂಬಿಕೆ ನಕ್ಷೆ ಹೆಸರಲ್ಲಿ ಆನ್ ಲೈನ್ ಖಾತಾ ನೋಂದಣೆಗೆ ಪ್ಲಾನ್ ಮಾಡಲಾಗಿದೆ. ಮನೆ ಮುಂದೆ ವಾಹನಗಳ ಪಾರ್ಕಿಂಗ್ ಕಡಿವಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಮೆಕಾನಿಕಲ್ ಕಾರ್ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಈ ನಡುವೆ ಪೌರಕಾರ್ಮಿಕರನ್ನು ಖಾಯಂ ಗೊಳಿಸಲಾಗುತ್ತಿದ್ದು, ಸದರಿ ವೇತನ ಮತ್ತು ಭತ್ಯೆಗಳಿಗಾಗಿ 500 ರೂ ಕೋಟಿ ಮೀಸಲು ಇಡಲಾಗಿದೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ಆಟೋಗಳ ಖರೀದಿ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಹಿಂದುಳಿದ, ಅಲ್ಪಸಂಖ್ಯಾತರು ಮತ್ತು ತೃತೀಯ ಲಿಂಗಿ ಸಮುದಾಯದ ಅರ್ಹ ಫಲಾನುಭವಿಗಳಿಗೆ 500 ಎಲೆಕ್ಟ್ರಿಕ್ ಸಾರಿಗೆ ಆಟೋಗಳು/ ಸರಕು ಇ ಆಟೋಗಳ ಖರೀದಿ, ಇದಕ್ಕಾಗಿ 10 ಕೋಟಿ ಮೀಸಲು ಇಡಲಾಗುತ್ತದೆ.
1 ಸಾವಿರ ಉದ್ಯೋಗಸ್ಥ ಮಹಿಳೆಯರು ಮತ್ತು ಪೌರಕಾರ್ಮಿಕರಿಗೆ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಮತ್ತು ವಿಶೇಷ ಚೇತನರಿಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳು 15 ಕೋಟಿ ಮೀಸಲಿಡಲಾಗಿದೆ. ಇದರ ಜೊತೆವೆ ಸುಗಮ ಸಂಚಾರಕ್ಕೆ 880 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸುರಂಗ ಮಾರ್ಗಕ್ಕೆ 42,000 ಕೋಟಿ ವ್ಯಯ ಮಾಡಲು ನಿರ್ಧಾರ ಮಾಡಲಾಗಿದ್ದು, ಎಲಿವೇಟೆಡ್ ಕಾರಡಾರ್ ಗ್ರೇಟ್ ಸಪರೇಟ್ ನಿರ್ಮಾಣ ಕ್ಕೆ ಅಂದಾಜು 13, 200 ಕೋಟಿ ವ್ಯಯ ಆಗಲಿದೆ ಹಾಗೂ ಡಬ್ಬಲ್ ಡೆಕ್ಕರ್ ನಿರ್ಮಾಣಕ್ಕೆ 9, 000 ಕೋಟಿ, ಉತ್ತಮ ಸಂಪರ್ಕಕ್ಕಾಗಿ ರಾಜಕಾಲುವೆ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ 3,000 ಕೋಟಿ, ರಸ್ತೆಗಳ ವೈಟ್ ಟಾಪಿಂಗ್‌ಗೆ 6,000 ಕೋಟಿ ವಿನಿಯೋಗಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.
Kunal kamra ಕುನಾಲ್ ಕಮ್ರಾ ವಿರುದ್ಧ ಮುಂಬೈನಲ್ಲಿ ಮೂರು ಪ್ರಕರಣಗಳು ದಾಖಲು