newsics.com
ಮೊಬೈಲ್ ಫೋನ್ನಲ್ಲಿ ಗಂಡ ಮಾಜಿ ಗರ್ಲ್ಫ್ರೆಂಡ್ ಜೊತೆ ಇರುವ ಫೋಟೋ ನೋಡಿ ಬಿಸಿ ಎಣ್ಣೆ ಕಾಯಿಸಿ ಗಂಡನ ಮರ್ಮಾಂಗಕ್ಕೆ ಸುರಿದಿದ್ದು, ಇದರಿಂದ ಗಂಡ ಗಂಭೀರ ಗಾಯಗೊಂಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಮಾಜಿ ಗೆಳತಿಯ ಜೊತೆ ಗಂಡನ ಫೋಟೋ ನೋಡಿ ನೆತ್ತಿಗೇರಿದೆ. ಪತ್ನಿಗೆ ಆಕೆಯ ಜೊತೆ ಸಂಬಂಧ ಇದೆ ತನಗೆ ಸಂಶಯಗೊಂಡು ಇದರಿಂದ ಗಂಡನಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ. ಗ್ಯಾಸ್ನಲ್ಲಿ ನೀರು ಮಿಶ್ರಿತ ಎಣ್ಣೆ ಬಿಸಿ ಮಾಡಿದ್ದು, ಬಳಿಕ ಗಂಡನ ಖಾಸಗಿ ಭಾಗಕ್ಕೆ ಎರಚಿದ್ದಾಳೆ. ಇದರಿಂದ ಗಂಡನ ಸ್ಥಿತಿ ಗಂಭೀರವಾಗಿದೆ. ಶೇ. 45ರಷ್ಟು ಸುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಗಂಡನ ಎದೆ ಕೈಗಳು, ಮರ್ಮಾಂಗ ಹಾಗೂ ತೊಡೆಯಲ್ಲಿ ಸುಟ್ಟ ಗಾಯಗಳಾಗಿವೆ. ಕೂಡಲೇ ಆತನನ್ನು ಎರ್ನಾಕುಲಂನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.