newsics.com
ಮುಸ್ಲಿಮರು ರಂಜಾನ್ ತಿಂಗಳ ಎಲ್ಲಾ ದಿನಗಳಲ್ಲೂ ಕಡ್ಡಾಯವಾಗಿ ಉಪವಾಸ ಆಚರಿಸುತ್ತಾರೆ. ಮುಸ್ಲಿಮರ ಇದೊಂದು ಅತಿ ಪವಿತ್ರವಾದ ಮಾಸವಾಗಿದೆ. ಸೂರ್ಯೋದಯದಿಂದ ಸೂರ್ಯಸ್ತದವರೆಗೂ ಉಪವಾಸವಿದ್ದು, ಸೂರ್ಯಾಸ್ತದ ಬಳಿಕ ಖರ್ಜೂರ ಸೇವಿಸುವ ಮೂಲಕ ರೋಜಾ ಪೂರ್ಣಗೊಳಿಸುತ್ತಾರೆ. ಆದರೆ ಹಿಂದೂ ಯುವತಿಯೊಬ್ಬಳು ತನ್ನ ಮುಸ್ಲಿಂ ಗೆಳತಿಯೊಂದಿಗೆ ಒಂದು ದಿನದ ಮಟ್ಟಿಗೆ ರಂಜಾನ್ ಉಪವಾಸವನ್ನು ಆಚರಿಸಿ, ಈ ವಿಡಿಯೋಯನ್ನು ಶೇರ್ ಮಾಡಿಕೊಂಡಿದ್ದಾಳೆ. ಸದ್ಯ ವಿಡಿಯೋ ವೈರಲ್ ಆಗಿದ್ದುಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಸುಹಾನಾ (suha_hana88) ಎಂಬ ಯುವತಿ ಈ ವಿಡಿಯೋವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂದು ತಿಂಗಳ ಕಾಲ ಉಪವಾಸ ಮಾಡುವವರಿಗೆ ವಂದನೆಗಳು ಮತ್ತು ದಯವಿಟ್ಟು ನಾನು ಮಾಡಿದ ಉಪವಾಸ ಕ್ರಮದಲ್ಲಿ ತಪ್ಪಿದ್ದರೆ ನನ್ನನ್ನು ಕ್ಷಮಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾಳೆ.
https://www.instagram.com/reel/DHgS0TkpxeJ/?igsh=bm01b2o5aWh3NnB4
.