ಮುಂಬೈ: ಮೊಘಲ್ ಚಕ್ರವರ್ತಿಗಳು ತಮ್ಮ ಸಮಾಧಿಗಾಗಿ ಬೃಹತ್ ಗುಮ್ಮಟಗಳನ್ನು ಕಟ್ಟಿಸಿಕೊಳ್ಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಗೆ ಒಂದು ಛಾವಣಿಯನ್ನು ಸಹ ಮಾಡಿಲ್ಲ. ಆದರೆ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಹೌದು, ಔರಂಗಜೇಬ್ ಸಮಾಧಿಯ ಸುತ್ತಲೂ ಗೋಡೆ ಮಾತ್ರ ಕಟ್ಟಿದ್ದು, ಸಮಾಧಿ ಮೇಲೆ ತುಳಸಿ ಗಿಡವೊಂದನ್ನು ನೆಡಲಾಗಿದೆ. ಅಷ್ಟಕ್ಕೂ ಸಮಾಧಿ ಮೇಲೆ ತುಳಸಿ ಇರೋದ್ಯಾಕೆ? ಸಮಾಧಿಗೆ ಛಾವಣಿಯನ್ನು ಸಹ ಮಾಡಿಲ್ಲ ಯಾಕೆ?
ಔರಂಗಜೇಬ್ ತನ್ನ ಸಮಾಧಿ ಹೀಗೆಯೇ ಇರಬೇಕೆಂದು ಹೇಳಿದ್ದ. ಸಮಾಧಿ ಮೇಲೆ ಮಣ್ಣು ಮಾತ್ರ ಇರಬೇಕು. ಮೇಲೆ ತುಳಸಿ ಗಿಡ ನೆಟ್ಟಿರಬೇಕು. ಯಾವುದೇ ಕಾರಣಕ್ಕೂ ಸಮಾಧಿಯನ್ನು ಛಾವಣಿಯಿಂದ ಮುಚ್ಚಬಾರದು. ಸದಾ ಸಮಾಧಿ ಬೆಳಕಿಗೆ ತೆರದಿರಬೇಕು ಎಂದು ಔರಂಗಜೇಬ್ ಬಯಸಿದ್ದ. ಈ ಹಿನ್ನೆಲೆಯಲ್ಲಿ ಇಂದಿಗೂ ಔರಂಗಜೇಬ್ ಸಮಾಧಿಗೆ ಛಾವಣಿಯನ್ನು ನಿರ್ಮಾಣ ಮಾಡಿಲ್ಲ. ಸಮಾಧಿಯ ಬಳಿ ಕಲ್ಲು ಇರಿಸಲಾಗಿದ್ದು, ಅದರ ಮೇಲೆ ಪೂರ್ಣ ಹೆಸರು ಅಬ್ದುಲ್ ಮುಜಾಫರ್ ಮುಹಿಯುದ್ದೀನ್ ಔರಂಗಜೇಬ್ ಅಲಂಗೀರ್ ಎಂದು ಬರೆಯಲಾಗಿದೆ.
ಪತ್ನಿಯ ಅಕ್ರಮ ಸಂಬಂಧ: 7 ಅಡಿ ಗುಂಡಿ ತೋಡಿ ಬಾಡಿಗೆದಾರನನ್ನು ಜೀವಂತ ಹೂಳಿದ ಪತಿ