ಕುಂದಾಪುರ :ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಭಯ ಇದ್ದೇ ಇರುತ್ತವೆ. ಟಾಪರ್ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಬರಲಿ ಎಂದು, ಇನ್ನೂ ಕೆಲವು ವಿದ್ಯಾರ್ಥಿಗಳು ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕಂದು ಇದ್ದಾಡುತ್ತಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಜಸ್ಟ್ ಪಾಸ್ ಆದ್ರೆ ಸಾಕು ಎಂದು ದೈವದ ಮೊರೆ ಹೋಗಿದ್ದಾನೆ.
ಇಂತಹ ಒಂದೂ ಘಟನ ಕುಂದಾಪುರದಲ್ಲಿ ನಡೆದಿದೆ. ವಿದ್ಯಾರ್ಥಿಯೋರ್ವ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಚೀಟಿ ಬರೆದು ದೈವಕ್ಕೆ ಕೋರಿಕೆಯಿಟ್ಟಿದ್ದಾನೆ. ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಈ ಚೀಟಿ ಪತ್ತೆಯಾಗಿದೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್ ಪಾಸ್ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದ್ದು, ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ.