newsics.com
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರದಲ್ಲಿ ಹಾಗೂ ತಿನಿಸುಗಳಲ್ಲಿ ಹೆಚ್ಚಾಗಿ ಕಲಬೆರಿಕೆ ಅಂಶ ಪತ್ತೆಯಾಗುತ್ತಿದೆ. ಇದೀಗ ಪನ್ನೀರ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆಯಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ವರದಿ ನೀಡಿದೆ.
ಕಲ್ಲಂಗಡಿಯಲ್ಲಿ ಕೆಮಿಕಲ್, ಸಿಹಿ ತಿಂಡಿ ಹಾಗೂ ಇಡ್ಲಿಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ ಮಾಡಿತ್ತು. ಇದೀಗ ಪನ್ನೀರ್‌ನ್ನು ಮೆದುವಾಗಿಸಲು ಕೆಮಿಕಲ್ ಬಳಸಲಾಗುತ್ತದೆ. ಈ ಕೆಮಿಕಲ್ ಕ್ಯಾನ್ಸರ್‌ಗೆ ಕಾರಣವಾಗುತ್ತೆ ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಕಡೆಯ ಪನ್ನೀರ್ ಅನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಲ್ಯಾಬ್ ಟೆಸ್ಟ್ ವರದಿ ಪ್ರಕಾರ, ಆತಂಕಕಾರಿ ಅಂಶ ಪತ್ತೆಯಾಗಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಪ್ರೋಟಿನ್ ಪ್ರಮಾಣ ಕಡಿಮೆಯಿರುವುದು ಕಂಡುಬಂದಿದೆ.