newsics.com
ನವದೆಹಲಿ: ದೆಹಲಿ ವಿವಿಯಲ್ಲಿ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ ಕಲ್ಲು ತೂರಾಟ ನಡೆದಿದೆ. ಉದ್ರಿಕ್ತ ಗುಂಪೊಂದು ವೇದಿಕೆಯತ್ತ ಬಾಟಲಿ, ಕಲ್ಲುಗಳನ್ನು ಎಸೆದಿದೆ.
ಹೌದು, ಆಹ್ವಾನದ ಮೇರೆಗೆ ಸೋನು ನಿಗಮ್ ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ ಎಂಜಿಫೆಸ್ಟ್ 2025ಕ್ಕೆ ಹಾಡು ಹಾಡಲು ಹೋಗಿದ್ದರು. ಇನ್ನು ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಜನಸಮೂಹದಲ್ಲಿ ಒಂದು ಉದ್ರಿಕ್ತ ಗುಂಪು ವೇದಿಕೆಯತ್ತ ಬಾಟಲಿ, ಕಲ್ಲುಗಳನ್ನು ಎಸೆದಿದೆ. ಈ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದ ಸೋನು ನಿಗಮ್ ತಮ್ಮ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದರು, ‘ನಾನು ಇಲ್ಲಿಗೆ ಹಾಡಲು ಬಂದಿದ್ದೇನೆ, ಶಾಂತವಾಗಿರಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು ಎಂದು ವರದಿಯಾಗಿದೆ.
ಆದರೆ ಸೋನು ನಿಗಮ್ ಮಾತ್ರ ನಿಂತ ಜಾಗದಿಂದ ಕದಲಲಿಲ್ಲ. ಬದಲಿಗೆ ಸಮಚಿತ್ತದಿಂದ ಪರಿಸ್ಥಿತಿಯನ್ನು ನಿಭಾಯಿಸಿದರು. ನಾನು ನಿಮಗೋಸ್ಕರ ಹಾಡು ಹಾಡಲು ಇಲ್ಲಿಯವರೆಗೆ ಬಂದಿದ್ದೇನೆ, ನಿಮಗೆ ನನ್ನ ಹಾಡುಗಳು ಇಷ್ಟವಾಗಿಲ್ಲ ಅಂದರೂ ಪರವಾಗಿಲ್ಲ ದಯವಿಟ್ಟು ಹೀಗೆಲ್ಲ ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡರು. ಆ ನಂತರ ಕೆಲ ಹೊತ್ತು ಅಲ್ಲಿಯೇ ನಿಂತು ಪರಿಸ್ಥಿತಿ ಸುಧಾರಿಸಿದ ನಂತರ ಬೇಸರ ಮಾಡಿಕೊಳ್ಳದೇ ಮತ್ತೆ ಹಾಡುಗಳನ್ನು ಹಾಡಿದರು.
ಸದ್ಯ ಕಾಲೇಜಿನಲ್ಲಿ ಸೋನು ನಿಗಮ್ ಹಾಡುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಬಹುತೇಕರು ವಿದ್ಯಾರ್ಥಿಗಳ ವರ್ತನೆಯನ್ನು ಖಂಡಿಸಿದ್ದಾರೆ.
ವಿನಯ್, ರಜತ್ ಗೆ ಮತ್ತೆ ಸಂಕಷ್ಟ; ತಡರಾತ್ರಿ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್