newsics.com
ಕರಾಟೆ ಲೆಜೆಂಟ್ ಎಂದೇ ಹೆಸರುವಾಸಿಯಾಗಿದ್ದ ತಮಿಳು ನಟ ಶಿಹಾನ್ ಹುಸೈನಿ ಮಾ.25ರಂದು ಬ್ಲಡ್ ಕ್ಯಾನ್ಸರ್ನಿಂದ ಇಹಲೋಕ ತ್ಯಜಿಸಿದ್ದಾರೆ.
ಶಿಹಾನ್ ಅವರು ಕರಾಟೆ ತಜ್ಞರಾಗಿದ್ದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ, ಹಾಲಿವುಡ್ ಸಿನಿಮಾದಲ್ಲಿಯೂ ಅವರು ನಟಿಸಿದ್ದಾರೆ. ಕಮಲ್ ಹಾಸನ್, ರಜನಿಕಾಂತ್, ದಳಪತಿ ವಿಜಯ್ ಸಿನಿಮಾಗಳಲ್ಲಿ ಶಿಹಾನ್ ನಟಿಸಿದ್ದಾರೆ.
ಅಂತಿಮ ದರ್ಶನಕ್ಕಾಗಿ ನಟನ ಪಾರ್ಥಿವ ಶರೀರ ಸಂಜೆಯವರೆಗೆ ಬೆಸೆಂಟ್ ನಗರದಲ್ಲಿರುವ ನಿವಾಸದಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಬಳಿಕ ಶಿಹಾನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲ