newsics.com
ಈಗಂತೂ ಸೋಶಿಯಲ್ ಮೀಡಿಯಾ ಯುಗ. ಡಿಫರೆಂಟ್ ಆಗಿ ಏನಾದ್ರೂ ಮಾಡಿದ್ರೆ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಕೆಲವು ಸಾಂಗ್ , ರೀಲ್ಸ್ ಗಳು ಭಾರಿ ಸೌಂಡ್ ಮಾಡುತ್ತೆ. ಅಂತಹ ಸಾಲಿನಲ್ಲಿ ಈ ಹಾಡು ಸದ್ಯ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ.
ಹೌದು , ಅನ್ನನ ಪಾಥಿಯ ಅಪಾ ತಿ ತೇ ತೇನಾ’ ಹಾಡು ಟ್ರೆಂಡಿಂಗ್ ನಲ್ಲಿ ಇದೆ. ಸಾವಿರಾರು ಸಂಖ್ಯೆಯಲ್ಲಿ ನೆಟ್ಟಿಗರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ಹಾಡಿಗೆ ರೀಲ್ಸ್ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ. ಎಲ್ಲರ ಬಾಯಲ್ಲಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡಿದ್ದೆ ಮಾತು
ಆದರೇ ಈ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡನ್ನು ಹಾಡಿರೋ ಸುಂದರಿ ಯಾರು ಗೊತ್ತಾ? ಈಕೆಯ ಹೆಸರು ನಿಕೇನ್ ಸಲಿಂದ್ರಿ ಇವಳು 2008ರಲ್ಲಿ ಜನಿಸಿದ್ದಾಳೆ. ನಿಕೇನ್ ಸಲಿಂದ್ರಿ ಬಡ ಕುಟುಂಬದ ಹುಡುಗಿಯಾಗಿದ್ದಾಳೆ.
ಈಕೆಯ ತಂದೆ ಕೂಡ ಒಬ್ಬ ಇಂಡೋನೇಷ್ಯಾದ ಡ್ಯಾಂಗ್ಡಟ್ ಗಾಯಕನಂತೆ. ಗಾಯನ ಮನೆಯಲ್ಲಿ ತುಂತುರಂತೆ ಬೀಳ್ತಾ ಇರುವಾಗ 2 ವರ್ಷದ ಈ ಪೋರಿಗೆ ಸಾಂಗ್ ಸೋನೆಯಂತೆ ಸೋಕಿತ್ತಂತೆ. 4ನೇ ವಯಸ್ಸಿಗೆ ತಂದೆ ಜೊತೆ ಸ್ಟೇಜ್ ಹತ್ತಿ ಹಾಡುತ್ತಿದ್ದಳಂತೆ. ಇದಾದ ಬಳಿಕ ನಿಕೇನ್ ಸಲಿಂದ್ರಿ ಆರ್ಕೆಸ್ಟ್ರಾಗಳಂಥ ಬ್ಯಾಂಡ್ನಲ್ಲಿ ಸೇರಿ ಊರೂರು ಸುತ್ತುತ್ತಾ ಹಾಡುಗಳನ್ನ ಹಾಡುತ್ತಿದ್ದಳಂತೆ. ಥೈಲ್ಯಾಂಡ್ ಸೇರಿದಂತೆ ಬೇರೆ ಬೇರೆ ಕಡೆಯೆಲ್ಲಾ ಈಕೆ ಹಾಡು ಹಾಡುತ್ತಲೇ ಇದ್ದಳು. ಹಾಡಿನ ಜೊತೆಗೆ ಪ್ರತಿ ಸಾಂಗ್ನಲ್ಲೂ ಒಂದು ಹುಕ್ ಸ್ಟೆಪ್ ಹಾಕುತ್ತಾಳೆ. ಸದ್ಯ ಈ ಸುಂದರಿ ಅನ್ನನ ಪಾಥಿಯ ಅಪಾ ತಿ ತೇ ತೇನಾ ಹಾಡಿನ ಮೂಲಕ ಫೇಮಸ್ ಆಗಿರುವುದು ಅಂತೂ ನಿಜ..