newsics.com
ಬೆಂಗಳೂರು: ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿರುವ ʼಎಲ್ -2 ಎಂಪುರಾನ್ʼ ಇದೇ ವಾರ ರಿಲೀಸ್ ಆಗಲಿದೆ. ಆದರೆ ಇಲ್ಲೊಂದು ಕಾಲೇಜು ವಿದ್ಯಾರ್ಥಿಗಳಿಗೆ ಸಿನಿಮಾ ವೀಕ್ಷಣೆ ಮಾಡಲೆಂದೇ ರಜೆ ಘೋಷಿಸಿದೆ.
ಹೌದು, ಮೋಹನ್ ಲಾಲ್ ಅವರ ʼಎಂಪುರಾನ್ʼ ಸಿನಿಮಾದ ಫಸ್ಟ್ ಡೇ ಫಸ್ಟ್ ಶೋ ನೋಡಲು ಬೆಂಗಳೂರಿನಲ್ಲಿರುವ ದಿ ಗುಡ್ ಶೆಫರ್ಡ್ ಕಾಲೇಜ್‌ನ ಆಡಳಿತ ಮಂಡಳಿ ತನ್ನ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ.
ಇನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಕಡೆಯಿಂದಲೇ ಟಿಕೆಟ್ ಬುಕ್ ಮಾಡಿಸಿದ್ದಾರೆ. ಅಲ್ಲದೇ, ಕಾಲೇಜು ತನ್ನ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರವನ್ನು ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮೋಹನ್ ಲಾಲ್ ಜತೆ ಮಂಜು ವಾರಿಯರ್, ಟೊವಿನೋ ಥಾಮಸ್, ಅಭಿಮನ್ಯು ಸಿಂಗ್ ಮತ್ತು ಸೂರಜ್ ವೆಂಜರಮೂಡು ಸೇರಿದಂತೆ ಹಾಲಿವುಡ್ ಸ್ಟಾರ್ಸ್‌ಗಳಾದ ಜೆರೋಮ್ ಫ್ಲಿನ್, ಎರಿಕ್ ಎಬೌನಿ ಮತ್ತು ಆಂಡ್ರಿಯಾ ತಿವಾಡರ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
https://www.instagram.com/p/DHfy_IKJurN/?igsh=aTM5YzQ4MmxlNGQx
K.N. Rajanna ಹನಿಟ್ರ್ಯಾಪ್ ಮಾಡಲು ಬ್ಲೂ ಜೀನ್ಸ್ ಹುಡುಗಿ ಬಂದಿದ್ದಳು: ರಹಸ್ಯ ಬಿಚ್ಚಿಟ್ಟ ಸಚಿವ ರಾಜಣ್ಣ