newsics.com
ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು.
ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಹಾಗೂ ಬಾಂಧವ್ಯಗಳು ಹಿಂದಿನಂತೆ ಬಲಿಷ್ಟವಾಗಿ ಉಳಿದಿಲ್ಲ. ಬದಲಿಗೆ ಈಗ ಮದುವೆ ಸಂಬಂಧಗಳು ಸಣ್ಣ ಪುಟ್ಟ ವಿಚಾರಗಳಿಂದ ಹಾಳಾಗುವುದು ನೋಡಬಹುದು.
ದಾಂಪತ್ಯ ದ್ರೋಹವೆಂಬುದು ಮೊದಲೆಲ್ಲ ಹೆಚ್ಚಾಗಿ ಪುರುಷರಿಂದ ಆಗುತ್ತಿತ್ತು. ಆದರೆ, ಈ ಶತಮಾನದ ಮಹಿಳೆಯರು ಇದರಲ್ಲೂ ಸಮಾನತೆಯತ್ತ ಸಾಗಿದ್ದಾರೆ.
ವಿವಾಹದ ಬಳಿಕ ಅತೃಪ್ತಿ ಅಥವಾ ಭಾವನಾತ್ಮಕ ಸಂಪರ್ಕದ ಕೊರತೆಯಂತಹ ಕಾರಣಗಳು ವಿವಾಹೇತರ ಸಂಬಂಧಕ್ಕೆ ಪ್ರಾಥಮಿಕ ಕಾರಣಗಳಾಗಿವೆ. ಅಲ್ಲದೆ, ನಿರೀಕ್ಷೆಯನ್ನು ಆತ ತಲುಪದಿದ್ದಾಗ ಆಕೆ ಸಂಬಂಧದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಸಾಮಾನ್ಯವಾಗಿ ಮಾತನಾಡದ ಭಾವನೆಗಳು ಮೋಸಕ್ಕೆ ದಾರಿ ಮಾಡಿಕೊಡುತ್ತವೆ.
ದಾಂಪತ್ಯದಲ್ಲಿ ಮೋಸ ಮಾಡುವ ಉದ್ದೇಶ ಅಲ್ಲದಿದ್ದರೂ ಸಂಬಂಧದಲ್ಲಿನ ಅತೃಪ್ತಿಯು ಮಹಿಳೆಯರನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಲೈಂಗಿಕ ಅತೃಪ್ತಿ ಮಹಿಳೆಯೊಬ್ಬಳು ತನ್ನ ಸಂಬಂಧದಲ್ಲಿ ದ್ರೋಹ ಹಾಗೂ ಮೋಸದಂತಹ ಪ್ರಕರಣಲ್ಲಿ ಭಾಗಿಯಾಗುವುದರ ಹಿಂದೆ ಬಹುತೇಕ ಈ ಕಾರಣವನ್ನು ಪಟ್ಟಿ ಮಾಡಬಹುದು.
ಎಲ್ಲಾ ಮೋಸ ಅಥವಾ ದ್ರೋಹದ ಪ್ರಕರಣದಲ್ಲಿ ಮಹಿಳೆಯು ಲೈಂಗಿಕ ತೃಪ್ತಿಗಾಗಿ ಎಸಗಿರುವುದಿಲ್ಲ. ಆಕೆಯ ಭಾವನಾತ್ಮಕ ಹಸಿವು ಕೂಡ ಕಾರಣವಾಗಿರುತ್ತದೆ.
- ಜೀವನ ನಿರ್ವಹಣೆಯ ಒತ್ತಡ
- ಅಸುರಕ್ಷಿತ ಭಾವನೆ
- ಜಗಳ ಹಾಗೂ ಕಾಳಜಿ ಕೊರತೆ
- ಕಡಿಮೆ ಸ್ವಾಭಿಮಾನ
- ಲೈಂಗಿಕ ಅತೃಪ್ತಿ
- ಭಾವನಾತ್ಮಕ ಹಸಿವು
- ಒಂಟಿತನ
- ಮಧ್ಯವಯಸ್ಸಿನ ಬಿಕ್ಕಟ್ಟು
ಪತಿ ತನ್ನ ಪತ್ನಿ ಬಗ್ಗೆ ಆಲಸ್ಯದಲ್ಲಿದ್ದರೆ, ಆಕೆಯ ಕುರಿತು ಕಾಳಜಿ, ಪ್ರೀತಿ ಹೊಂದಿರದೇ ಇರುವ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುವುದು ನೋಡಬಹುದು.
ಮಹಿಳೆಯು ತನ್ನ ಪತಿಯ ಜೊತೆಗಿದ್ದಾಗಲೇ ಅಸುರಕ್ಷಿತ ಭಾವನೆಯಲ್ಲಿದ್ದರೆ ಆಕೆ ದ್ರೋಹ ಅಥವಾ ಮೋಸದಂತಹ ಕೆಲಸಕ್ಕೆ ಮುಂದಾಗುವ ಸಾಧ್ಯತೆ ಹೆಚ್ಚು ಎನ್ನಬಹುದು.