newsics.com
ಇದೊಂದು ಪುಟ್ಟ ಹಳ್ಳಿಯಾದರೂ ಸಂಪ್ರದಾಯವನ್ನು ಮಾತ್ರ ಚಾಚು ತಪ್ಪದೇ ಪಾಲಿಸಿಕೊಂಡು ಬರುತ್ತಾರೆ. ಒಂದು ಹೆಂಡತಿಯನ್ನೇ ನೋಡುವುದು ಕಷ್ಟವಾಗುವ ಈ ಕಾಲದಲ್ಲಿ, ಈ ಗ್ರಾಮದ ಪ್ರತಿಯೊಬ್ಬ ಪುರುಷನೂ ಇಬ್ಬರನ್ನು ಮದುವೆಯಾಗಲೇಬೇಕು. ಈ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿ ಇರುವುದು ಮಗುವನ್ನು ಪಡೆಯುವ ಉದ್ದೇಶಕ್ಕಾಗಿ ಎಂಬುದೇ ವಿಶೇಷ. ಅದರಲ್ಲೂ ಗಂಡುನಗುವಿಗೇ ಆದ್ಯತೆ.
ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಈ ಸಂಪ್ರದಾಯ ಇದೆ. ಇಲ್ಲಿ ಪ್ರತಿ ಪುರುಷನಿಗೂ ಇಬ್ಬರು ಪತ್ನಿಯರು ಇದ್ದಾರೆ. ಈ ಗ್ರಾಮದ ಪುರುಷರು ಮೊದಲ ಹೆಂಡತಿಯಲ್ಲಿ ಮಗುವನ್ನು ಪಡೆಯುವುದಿಲ್ಲ ಎಂಬ ನಂಬಿಕೆ ಇದೆ. ಹಾಗೊಂದು ವೇಳೆ ಮಗುವನ್ನು ಪಡೆದರೂ ಅದು ಹೆಣ್ಣಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿ ಪುರುಷರಿಗೆ ಎರಡು ಮದುವೆ ಕಡ್ಡಾಯ ಮಾಡಲಾಗಿದೆ. ಎರಡನೇ ಮದುವೆಯಾಗಿ ಬರುವ ಹೆಂಡತಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಎಂಬ ಕಾರಣಕ್ಕೆ ಈ ಕಟ್ಟುಪಾಡು ಈಗಲೂ ಜೀವಂತವಾಗಿದೆ.
ಒಬ್ಬ ಪುರುಷನಿಗೆ ಇಬ್ಬರು ಹೆಂಡತಿಯರು ಇದ್ದರೂ ಕುಟುಂಬದಲ್ಲಿ ಎಂದೂ ಜಗಳವಾಗುವುದಿಲ್ಲ. ಹಿಂದಿನ ಕಾಲದ ಬಹುತೇಕರು ಎರಡು ಮದುವೆಗಳನ್ನು ಮಾಡಿಕೊಳ್ಳುವ ಸಂಪ್ರದಾಯ ಅನುಸರಿಸುತ್ತಿದ್ದರು. ಆದರೆ ಈ ಊರಲ್ಲಿ ಇದು ಕಡ್ಡಾಯ.
MLA Munirathna ವಿಧಾನಸೌಧದಲ್ಲೇ ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ
Honey trap ಸದನದಲ್ಲಿ ಹನಿಟ್ರ್ಯಾಪ್ ಸದ್ದು, ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶ