newsics.com
ಬೆಂಗಳೂರು: ಹನಿಟ್ರ್ಯಾಪ್ ವಿಚಾರ ಇದೀಗ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಗುಲ್ಲೇಬಿಸಿದೆ. ಸಚಿವರು ಹಾಗೂ ಕೇಂದ್ರದ ಮುಖಂಡರಿಗೂ ಹನಿಟ್ರ್ಯಾಪ್ ಮಾಡಲಾಗಿದೆ ಅಂತಾ ಕೆಲ ಸಚಿವರೇ ಗಂಭೀರ ಆರೋಪ ಮಾಡಿದ್ದಾರೆ. ವಿಪಕ್ಷದ ನಾಯಕರಂತೂ ಇದೇ ವಿಚಾರಕ್ಕೆ ನಿಗಿ ನಿಗಿ ಅಂತಿದ್ದಾರೆ.
ಈ ವಿಚಾರವಾಗಿ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಮಾತನಾಡಿ, ಹನಿಟ್ರ್ಯಾಪ್ ಟೀಮ್ ಯಾರು ಅಂತಾ ಗೊತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕ
ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಮುನಿರತ್ನ, ಈ ಹಿಂದೆ ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಹನಿಟ್ರ್ಯಾಪ್ ಮಾಡಿದ್ದರು. ನಾನು ಕಾಂಗ್ರೆಸ್ನಿಂದ ಬಿಜೆಪಿಗೆ ಹೋದಾಗಲೇ ಪ್ರಯತ್ನ ಪಟ್ಟಿದ್ದಾರೆ. ಈಗ ರಾಜಣ್ಣಗೆ ಹನಿಟ್ರ್ಯಾಪ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಹೋಮ್ ಮಿನಿಸ್ಟರ್ ಈಗ ತನಿಖೆಗೆ ಆದೇಶಿಸುತ್ತೇನೆ ಎಂದಿದ್ದಾರೆ. ಇದನ್ನ ಇಲ್ಲಿಗೆ ನಿಲ್ಲಸಬೇಕು. ಇಲ್ಲದಿದ್ದರೆ ಎಲ್ಲ ಶಾಸಕರ ಜೀವನವನ್ನ ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು.