newsics.com
ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ಅವರ ಹನಿಟ್ರ್ಯಾಪ್ ಆರೋಪ ಸದನದಲ್ಲಿ ಗುರುವಾರ ಸದ್ದು ಮಾಡಿತು.
ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಘೋಷಿಸಿದರು.
ವಿಧಾನಸಭೆಯಲ್ಲಿ ಸಚಿವ ರಾಜಣ್ಣ ಅವರು ಹನಿಟ್ರ್ಯಾಪ್ ಬಗ್ಗೆ ದೂರು ನೀಡುವುದಾಗಿ ಸ್ಪಷ್ಟನೆ ನೀಡಿದರು.
ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹನಿಟ್ರ್ಯಾಪ್ ಆರೋಪ- ಪ್ರತ್ಯಾರೋಪದ ಸತ್ಯಾಸತ್ಯತೆ ತಿಳಿಯಲು ಶೀಘ್ರವೇ ತನಿಖೆಗೆ ಆದೇಶಿಸಿವುದಾಗಿ ಘೋಷಿಸಿದರು.
ಹನಿಟ್ರ್ಯಾಪ್ನಂಥ ಕೆಟ್ಟ ವರ್ತನೆಗೆ ಫುಲ್ ಸ್ಟಾಪ್ ಹಾಕಬೇಕು. ಇದು ಸದನದ ಎಲ್ಲಾ ಸದಸ್ಯರ ಮರ್ಯಾದೆಯ ಪ್ರಶ್ನೆಯಾಗಿದೆ. ಜನಪ್ರತಿನಿದಿಗಳ ಗೌರವ, ಘಟನೆಯನ್ನು ಉಳಿಸುವ ಅಗತ್ಯವಿದೆ. ಇದು ಒಬ್ಬರು ಇಬ್ಬರು ಸಚಿವರ ಹನಿಟ್ರ್ಯಾಪ್ ಅಲ್ಲ. ಇದು ಎಲ್ಲರ ಮರ್ಯಾದೆಯ ಪ್ರಶ್ನೆಯಾಗಿದೆ. ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.
ಸಚಿವ ಜಾರಕಿಹೊಳಿ ಸ್ಫೋಟಕ ಹೇಳಿಕೆ:
ಲೋಕೋಪಯೋಗಿ ಇಲಾಖೆಯ ಸಚಿವರಾದಂತಹ ಸತೀಶ್ ಜಾರಕಿಹೊಳಿಯವರು ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಈ ಹೇಳಿಕೆ ನೀಡಿದ್ದು, ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಆಗಿದೆ. ಸಚಿವರಿಗೆ ಹನಿಟ್ರ್ಯಾಪ್ ಆಗಿರುವುದು ನಿಜ. ಈ ಒಂದು ಹನಿಟ್ರ್ಯಾಪ್ ನಲ್ಲಿ ನಮ್ಮವರು ಅಷ್ಟೇ ಅಲ್ಲದೆ ಬೇರೆ ಪಕ್ಷದ ನಾಯಕರೂ ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ ಎಂದರು.
ಕೆಲವರು ಹನಿಟ್ರ್ಯಾಪ್ ಅನ್ನು ಬಂಡವಾಳ ಮಾಡಿಕೊಂಡಿದ್ದಾರೆ. ಸಂಬಂಧಪಟ್ಟ ಸಚಿವರಿಗೆ ದೂರು ಕೊಡಲು ಹೇಳಿದ್ದೇನೆ. ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ನಮ್ಮಲ್ಲಿ ಒಬ್ಬ ಸಚಿವರ ವಿಕೆಟ್ ಬೀಳಿಸಲು ಯತ್ನಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
betting app promotion ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ: 25 ಸೆಲೆಬ್ರಿಟಿ ವಿರುದ್ಧ ಎಫ್ಐಆರ್
Rich MLAs List ದೇಶದ 10 ಶ್ರೀಮಂತ ಶಾಸಕರ ಪಟ್ಟಿ ರಿಲೀಸ್: ಡಿಕೆಶಿಗೆ ಎಷ್ಟನೇ ಸ್ಥಾನ?