newsics.com
ನವದೆಹಲಿ : ನರ್ಸ್ ತಾನು ಆರೈಕೆ ಮಾಡಬೇಕಾದ ರೋಗಿಯೊಂದಿಗೆ ಸುಮಾರು ಒಂದು ವರ್ಷದಿಂದ ನಿರಂತರ ಲೈಂಗಿಕ ಸಂಪರ್ಕದಲ್ಲಿದ್ದು, ಇತ್ತೀಚೆಗಷ್ಟೇ ಲೈಂಗಿಕ ಸಂಭೋಗದ ವೇಳೆ ರೋಗಿ ಸಾವನ್ನಪ್ಪಿದ್ದು, ಘಟನೆ ಬೆಳಕಿಗೆ ಬಂದಿದೆ.
ಯುನೈಟೆಡ್ ಕಿಂಗ್‌ಡಮ್‌ನ ವೇಲ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ನರ್ಸ್ ಪೆನೆಲೋಪ್ ವಿಲಿಯಮ್ಸ್(42) ಎಂದು ಗುರುತಿಸಲಾಗಿದೆ. ರೋಗಿಯು ವೇಲ್ಸ್‌ನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು.
ಪಾರ್ಕಿಂಗ್ ಸ್ಥಳದಲ್ಲಿ ನರ್ಸ್ ಜೊತೆ ಸಂಭೋಗದ ಸಮಯದಲ್ಲಿ ಕುಸಿದು ಬಿದ್ದದ್ದು, ವಿಷಯ ತಿಳಿದ ವೈದ್ಯಕೀಯ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ರೋಗಿಯು ಭಾಗಶಃ ಬೆತ್ತಲೆಯಾಗಿರುವುದು ಕಂಡುಬಂದಿದೆ.
ವಿಚಾರಣೆಯ ಸಮಯದಲ್ಲಿ ತನ್ನ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಳು ನಡೆಯುತ್ತಿದ್ದು, ಇದೀಗಾಗಲೇ ನರ್ಸ್ನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದೆ.