newsics.com
ಸಿಂಗಾಪುರ: ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ (ಭಾರತೀಯ ರೂಪಾಯಿಯಲ್ಲಿ 33 ಕೋಟಿ) ಜಾಕ್‌ಪಾಟ್ ಗೆದ್ದ ವ್ಯಕ್ತಿಯೊಬ್ಬ ಗೆದ್ದ ಖುಷಿಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಖುಷಿಯನ್ನು ಸಂಭ್ರಮಿಸುವ ವೇಳೆಯೇ ಹೃದಯಾಘಾತವಾಗಿ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಕ್ಯಾಸಿನೊ ಸಿಬ್ಬಂದಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.
ಲಾಸ್ ವೇಗಾಸ್ ಸ್ಯಾಂಡ್ಸ್ ನಿರ್ವಹಿಸುತ್ತಿರುವ ಐಕಾನಿಕ್ ಕ್ಯಾಸಿನೊದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.