Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Health tips ಮುಟ್ಟಾಗೋದು ವಿಳಂಬ ಆಗ್ತಾ ಇದ್ಯಾ; ಪೀರಿಯಡ್ಸ್ ಲೇಟ್ ಆಗೋಕೆ ಇವೂ ಕೂಡ ಕಾರಣ
ಕರ್ನಾಟಕಪ್ರಮುಖ

Health tips ಮುಟ್ಟಾಗೋದು ವಿಳಂಬ ಆಗ್ತಾ ಇದ್ಯಾ; ಪೀರಿಯಡ್ಸ್ ಲೇಟ್ ಆಗೋಕೆ ಇವೂ ಕೂಡ ಕಾರಣ

Share
2 Min Read
SHARE

newsics.com
ಋತುಚಕ್ರವೆನ್ನುವುದು ಮಹಿಳೆಯರಿಗೆ ಪ್ರಕೃತಿ ಸಹಜವಾಗಿ ಆಗುವ ಕ್ರಿಯೆ. ಆದರೆ ಕೆಲವೊಮ್ಮೆ ಮಹಿಳೆಯರಿಗೆ ಸರಿಯಾಗಿ ಋತುಚಕ್ರವು ಆಗದೆ ಇರಬಹುದು ಅಥವಾ ವಿಳಂಬವಾಗಬಹುದು. ಇಂತಹ ತಪ್ಪಿದ ಋತುಚಕ್ರವನ್ನು ಸಾಮಾನ್ಯವಾಗಿ ಗರ್ಭಧಾರಣೆಯ ಸಂಕೇತವೆಂದು ಹೇಳಲಾಗುತ್ತದೆ. ಮಹಿಳೆಯು ಪ್ರೌಢಾವಸ್ಥೆಗೆ ತಲುಪಿದ ಬಳಿಕ ಆಕೆಯಲ್ಲಿ ಎರಡು ಸಲ ಮಾತ್ರ ಋತುಚಕ್ರವು ವಿಳಂಬವಾಗಬಹುದು.

ಒಂದು ಗರ್ಭಧಾರಣೆ, ಮತ್ತೊಂದು ಋತುಬಂಧದ ಸಂದರ್ಭದಲ್ಲಿ. ಋತುಚಕ್ರವು 28 ದಿನಗಳಿಗೊಮ್ಮೆ ನಡೆಯುವಂತಹ ಕ್ರಿಯೆ. ಆದರೆ ಇದು ಕೆಲವೊಮ್ಮೆ 2-35 ದಿನಗಳ ತನಕವೂ ಸಾಗಬಹುದು. ಆದರೆ ಇದು ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ 35ಕ್ಕಿಂತ ಹೆಚ್ಚು ದಿನವಾದರೆ ಅದು ಚಿಂತೆಯ ವಿಚಾರವಾಗಿರುವುದು. ಋತುಚಕ್ರವು ವಿಳಂಬವಾಗುತ್ತಲಿದ್ದರೆ ಅಥವಾ ಆಗದೆ ಇದ್ದರೆ ಆಗ ನೀವು ಕೇವಲ ಗರ್ಭಧಾರಣೆ ಎಂದು ಕುಳಿತುಕೊಳ್ಳಬಾರದು. ಇದಕ್ಕೆ ಇನ್ನು ಕೆಲವು ಕಾರಣಗಳು ಕೂಡ ಇರಬಹುದು.

ಪ್ರೆಗ್ನನ್ಸಿ

ಮದುವೆಯಾದ ಹೆಂಗೆಳೆಯರಿಗೆ ಮೊದಲು ಬರುವ ಯೋಚನೆಯೇ ಇದು. ಪೀರಿಯಡ್ಸ್ ಆಗದಿರಲು ಇರುವ ಪ್ರಮುಖ ಕಾರಣ ಪ್ರೆಗ್ನನ್ಸಿಯಾಗಿರಬಹುದು.

ಸ್ಟ್ರೆಸ್

ನೀವು ಹೆಚ್ಚಿನ ಸ್ಟ್ರೆಸ್ ತೆಗೆದುಕೊಳ್ಳುವುದರಿಂದ ಹಲವಾರು ಬಾರಿ ನಮ್ಮ ಪೀರಿಯಡ್ಸ್ ಸೈಕಲ್ ನಲ್ಲಿ ವ್ಯತ್ಯಾಸ ಆಗುತ್ತೆ. ಸ್ಟ್ರೆಸ್ ನಮ್ಮ ಮೆದುಳಿನ ಹೈಪೋಥಾಲಮಸ್ ಭಾಗವನ್ನು ಪ್ರಭಾವಿತಗೊಳಿಸಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಪೀರಿಯಡ್ಸ್ ಹೆಚ್ಚು ಕಮ್ಮಿಯಾಗತ್ತೆ.

ವೆಯಿಟ್ ಫ್ಲಕ್ಚುಯೇಷನ್

ತೂಕದಲ್ಲಿ ತೀವ್ರ ಏರುಪೇರಾಗೋದು ದೇಹದ ಹಾರ್ಮೋನ್ ಸಮತೋಲನ ಅಸ್ಥಿರಗೊಳ್ಳುತ್ತದೆ. ಇದರಿಂದ ಪೀರಿಯಡ್ಸ್ ಬೇಗ ಬರೋದು ಅಥವಾ ಲೇಟ್ ಆಗೋದು ಆಗುತ್ತೆ.

ಅಧಿಕ ತೂಕ

ನಮ್ಮ ದೇಹದ ತೂಕ ಹೆಚ್ಚಾಗಿ ಇನ್‌ಸುಲಿನ್ ಮಟ್ಟದ ಏರುಪೇರುಗಳಿಂದ ಹಾರ್ಮೋನ್ ಗೆ ತೊಂದರೆಯಾದಾಗ.

ಕಡಿಮೆ ತೂಕ

ದೇಹದ ತೂಕ ಕಡಿಮೆಯಾದಾಗ ದೇಹಕ್ಕೆ ಬೇಕಾದ ಈಸ್ಟ್ರೋಜೆನ್ ಉತ್ಪಾದನೆ ಕಡಿಮೆಯಾಗಿ ಪೀರಿಯಡ್ಸ್ ನಲ್ಲಿ ವ್ಯತ್ಯಾಸವಾಗಬಹುದು.

ಹಾರ್ಮೋನಲ್ ಇಂಬ್ಯಾಲೆನ್ಸ್

ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಸಮತೋಲನದಲ್ಲಿರಬೇಕು. ಆದ್ರೆ ಕೆಲವೊಮ್ಮೆ ಸಾಂಕ್ರಾಮಿಕ ಅಥವಾ ಅನುವಂಶಿಕ ಕಾರಣದಿಂದ ವ್ಯತ್ಯಾಸ ಆದಾಗ ಪೀರಿಯಡ್ಸ್ ನಲ್ಲಿ ತೊಂದರೆ ಆಗಬಹುದು.

ಪಿಸಿಒಎಸ್

ಈ ಸಮಸ್ಯೆಯಲ್ಲಿ ಅಂಡಾಶಯದಲ್ಲಿ ಪುರುಷ ಹಾರ್ಮೋನ್ ಹೆಚ್ಚಾಗಿ ಉತ್ಪತ್ತಿಯಾಗುತ್ತವೆ, ಹೀಗಾಗಿ ಪೀರಿಯಡ್ಸ್ ನಲ್ಲಿ ಅಸಮತೋಲನವಾಗಬಹುದು.

ಕಠಿಣ ವ್ಯಾಯಾಮ

ಹೆಚ್ಚು ಶಾರೀರಿಕ ಶ್ರಮ ಅಥವಾ ಕಠಿಣ ವ್ಯಾಯಾಮದ ಅಭ್ಯಾಸವು ದೇಹದ ಇಸ್ಟ್ರೋಜನ್ ಮಟ್ಟವನ್ನು ತಗ್ಗಿಸಿ ಪೀರಿಯಡ್ಸ್ ನಲ್ಲಿ ವ್ಯತ್ಯಾಸ ತರುತ್ತದೆ.

ಔಷಧಿಗಳ ಪ್ರಭಾವ

ಕೆಲವು ಔಷಧಿಗಳು, ವಿಶೇಷವಾಗಿ ಗರ್ಭನಿರೋಧಕ ಮಾತ್ರೆಗಳು, ರಕ್ತದೊತ್ತಡದ ಔಷಧಿಗಳು ಹಾರ್ಮೋನ್ ಮಟ್ಟದ ಬದಲಾವಣೆಗೆ ಕಾರಣವಾಗುತ್ತದೆ. ಇದರಿಂದ ಪೀರಿಯಡ್ಸ್ ಹೆಚ್ಚು ಕಮ್ಮಿ ಆಗೋ ಸಾಧ್ಯತೆ ಇದೆ.

TAGGED:Health tips Menstruation is delayed; This is also the reason for late periods
Share This Article
Facebook Twitter Copy Link Print
Previous Article ರಾಜ್ಯದಲ್ಲಿ ಮತ್ತೊಂದು ‘ATM’ ದರೋಡೆ : ಬೆಂಗಳೂರಲ್ಲಿ 30 ಲಕ್ಷ ಹಣ ದೋಚಿ ಖದೀಮರು ಎಸ್ಕೇಪ್
Next Article Health tips ಮನೆಯಲ್ಲಿ ಹಲ್ಲಿಗಳ ಕಾಟ ಹೆಚ್ಚಾಗಿದ್ಯಾ? ಈ ರೀತಿ ಮಾಡಿ ಸಾಕು

Popular Posts

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಕರ್ನಾಟಕಪ್ರಮುಖ

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?